ADVERTISEMENT

ಮಹಿಳೆಯರಿಂದ ‘ವಟ ಸಾವಿತ್ರಿ ವ್ರತ’

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 12:48 IST
Last Updated 16 ಜೂನ್ 2019, 12:48 IST
ಬೆಳಗಾವಿಯ ಕಪಿಲೇಶ್ವರ ಮಂದಿರದಲ್ಲಿ ಮಹಿಳೆಯರು ಭಾನುವಾರ ವಟ ಸಾವಿತ್ರಿ ವ್ರತ ಆಚರಿಸಿದರು
ಬೆಳಗಾವಿಯ ಕಪಿಲೇಶ್ವರ ಮಂದಿರದಲ್ಲಿ ಮಹಿಳೆಯರು ಭಾನುವಾರ ವಟ ಸಾವಿತ್ರಿ ವ್ರತ ಆಚರಿಸಿದರು   

ಬೆಳಗಾವಿ: ನಗರದಲ್ಲಿ ವಿವಾಹಿತ ಮಹಿಳೆಯರು ಭಾನುವಾರ ‘ವಟ ಸಾವಿತ್ರಿ ವ್ರತ’ವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಪತಿ ಸತ್ಯವಾನ್‌ನನ್ನು ಉಳಿಸಿಕೊಳ್ಳಲು ಯಮನನ್ನು ಮೆಚ್ಚಿಸಿದ ಸಾವಿತ್ರಿಯ ನೆನಪಿಗಾಗಿ ಈ ದಿನವನ್ನು ವಟ ಸಾವಿತ್ರಿಯ ವ್ರತವನ್ನಾಗಿ, ಗೌರವಾರ್ಥವಾಗಿ ಮಹಿಳೆಯರು ಆಚರಿಸುತ್ತಾರೆ. ಈ ಆಚರಣೆ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಕಂಡುಬಂದಿತು. ಪತಿಗೆ ಆರೋಗ್ಯ ಮತ್ತು ಆಯುಷ್ಯವನ್ನು ಪ್ರಾರ್ಥಿಸಿದರು.

ಸಮೀಪದಲ್ಲಿರುವ ದೇವಸ್ಥಾನಗಳಿಗೆ ಪೂಜಾ ಸಾಮಗ್ರಿಗಳೊಂದಿಗೆ ಬೆಳಿಗ್ಗೆಯಿಂದಲೇ ಬಂದ ಅವರು, ಆವರಣದಲ್ಲಿರುವ ಆಲದ ಮರಕ್ಕೆ ಪೂಜೆ ಸಲ್ಲಿಸಿ ವ್ರತ ಆಚರಿಸಿದರು. ಕಪಿಲೇಶ್ವರ ಮಂದಿರ, ಶಾಹುನಗರದ ಶಿವ ದೇವಾಲಯ, ರಾಣಿ ಚನ್ನಮ್ಮ ವೃತ್ತದ ಗಣೇಶ ಮಂದಿರ ಮೊದಲಾದ ಕಡೆಗಳಲ್ಲಿ ನೂರಾರು ಮಹಿಳೆಯರು ಆಲದ ಮರಕ್ಕೆ ಭಕ್ತಿಭಾವದಿಂದ ನೂಲನ್ನು ಸುತ್ತುವ ಹಾಗೂ ಪ್ರದಕ್ಷಿಣೆ ಹಾಕುವ ಮೂಲಕ ಪೂಜೆ ಸಲ್ಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.