ADVERTISEMENT

ವಿಟಿಯು: 15ರವರೆಗೂ ಆನ್‌ಲೈನ್‌ ಪಾಠ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 20:17 IST
Last Updated 4 ಜೂನ್ 2020, 20:17 IST

ಬೆಳಗಾವಿ: ‘ಕೋವಿಡ್–19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದಿಂದ ನಡೆಸುತ್ತಿರುವ ಆನ್‌ಲೈನ್‌ ಪಾಠವನ್ನು ಜೂನ್‌ 15ರವರೆಗೆ ಮುಂದುವರಿಸಲಾಗುತ್ತದೆ’ ಎಂದು ಕುಲಪತಿ ಡಾ.ಕರಿಸಿದ್ದಪ್ಪ ತಿಳಿಸಿದ್ದಾರೆ.

‘ಶೇ 70ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ತರಗತಿಗಳಿಗೆ ಹಾಗೂ ಶೇ 95ರಷ್ಟು ಮಂದಿ ಸಿಐಇ (ನಿರಂತರ ಆಂತರಿಕ ಮೌಲ್ಯಮಾಪನ) ಅಂದರೆ ಆಂತರಿಕ ಪರೀಕ್ಷೆಗಳಿಗೆ ಹಾಜರಾಗಿದ್ದಾರೆ. ಆನ್‌ಲೈನ್‌ ಮೂಲಕವೇ ತಮ್ಮ ಕಾರ್ಯಯೋಜನೆ(ಅಸೈನ್‌ಮೆಂಟ್‌) ಸಲ್ಲಿಸಿರುವ ಬಗ್ಗೆ ಪ್ರಾಂಶುಪಾಲರು ದೃಢಪಡಿಸಿದ್ದಾರೆ’ ಎಂದರು.

‘ಲಾಕ್‌ಡೌನ್‌ಗೂ ಮುನ್ನ ಕಾಲೇಜುಗಳಲ್ಲಿ ಶೇ 20– 30ರಷ್ಟು ಪಠ್ಯಕ್ರಮ ಪೂರ್ಣಗೊಂಡಿತ್ತು. ಮೇ ಅಂತ್ಯದ ವೇಳೆಗೆ ಶೇ 70– 75ರಷ್ಟು ಪಠ್ಯಕ್ರಮ ಪೂರ್ಣಗೊಂಡಿದೆ.

ADVERTISEMENT

‘ಕಲಿಕಾ ಪ್ರಕ್ರಿಯೆ ಮುಂದುವರಿಸಲು ಡಿಜಿಟಲ್ ತಂತ್ರಜ್ಞಾನದ ಮೂಲಕ ಪರ್ಯಾಯ ವೇದಿಕೆಗಳನ್ನು ಪರಿಣಾಮಕಾರಿ
ಯಾಗಿ ಬಳಸಲಾಗಿದೆ. ಆನ್‌ಲೈನ್ ತರಗತಿಗಳು ವಿದ್ಯಾರ್ಥಿಗಳನ್ನು ಸರಿಯಾಗಿ ತಲುಪಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.