ADVERTISEMENT

ತೆಲಸಂಗ: ಒಣಗುತ್ತಿರುವ ಸಸಿಗಳು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 7:57 IST
Last Updated 27 ಆಗಸ್ಟ್ 2021, 7:57 IST
ತೆಲಸಂಗ ಗ್ರಾಮದ ಹೊರವಲಯದಲ್ಲಿ ನೆಡಲಾದ ಸಸಿಗಳು ಒಣಗುತ್ತಿವೆ
ತೆಲಸಂಗ ಗ್ರಾಮದ ಹೊರವಲಯದಲ್ಲಿ ನೆಡಲಾದ ಸಸಿಗಳು ಒಣಗುತ್ತಿವೆ   

ತೆಲಸಂಗ (ಬೆಳಗಾವಿ ಜಿಲ್ಲೆ): ಹೊರವಲಯದಲ್ಲಿ ನೆಡಲಾಗಿರುವ ಸಸಿಗಳು ಒಣಗುತ್ತಿವೆ.

ನೀರುಣಿಸುವ ಕಾರ್ಯವನ್ನು ಸಂಬಂಧಿಸಿದವರು ಮಾಡಿಲ್ಲ. ಇದು ಪರಿಸರ ಪ್ರೇಮಿಗಳು ಮತ್ತು ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ.

‘ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯ್ತಿ ನಡುವಿನ ಸಮನ್ವಯದ ಕೊರತೆಯಿಂದ ಸಸಿಗಳು ಒಣಗುತ್ತಿವೆ. ತಕ್ಷಣವೇ ನೀರು ಹಾಕಿ ಸಸಿಗಳನ್ನು ಉಳಿಸಬೇಕಿದೆ. ಕಲ್ಲು ಪ್ರದೇಶದ ಕುಣಿಯಲ್ಲಿ ಮಣ್ಣು ತುಂಬದೆ ಸಸಿ ನೆಡಲಾಗಿದೆ. ಸಸಿ ನೆಡುವಾಗಲೂ ನೀರನ್ನು ಉಣಿಸಿಲ್ಲ. 15 ದಿನಗಳಿಂದ ಮಳೆಯೂ ಇಲ್ಲ; ನೀರನ್ನೂ ಉಣಿಸುತ್ತಿಲ್ಲ. ಬಹುತೇಕ ಸಸಿಗಳು ಒಣಗುತ್ತಿವೆ. ಸಸಿಗಳನ್ನು ಉಳಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ’ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಮಳೆಗಾಲ ಮುಗಿಯುವ ಹಂತದಲ್ಲಿ ಸಸಿ ನೆಟ್ಟಿದ್ದು ಮಾತ್ರವಲ್ಲದೆ, ನೀರುಣಿಸುವ ಕೆಲಸವನ್ನೂ ಮಾಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕಾಟಾಚಾರಕ್ಕೆ ವನಮಹೋತ್ಸವ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಜನರ ತೆರಿಗೆ ಹಣವನ್ನು ಪೋಲು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

‘ಪಾಲನೆಯ ಜವಾಬ್ದಾರಿ ನಿರ್ವಹಿಸಿ ಶೇ 90ರಷ್ಟು ಸಸಿಗಳನ್ನಾದರೂ ಉಳಿಸಿ–ಬೆಳೆಸಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದು ಮತ್ತು ಗ್ರಾಮಸ್ಥರಿಂದ ಸಹಿ ಸಂಗ್ರಹಿಸಿ ಸರ್ಕಾರಕ್ಕೆ ದೂರು ನೀಡುವುದು ಅನಿವಾರ್ಯವಾಗುತ್ತದೆ’ ಎಂದು ಮುಖಂಡರಾದ ಸಂಜಯ, ರಾಜಕುಮಾರ ಹೊನಕಾಂಬಳೆ, ಅಶೋಕ ಮುಧೋಳ, ಶಶಿ ಮಾದರ, ರಾಜು ಸಾಗರ ಎಚ್ಚರಿಸಿದ್ದಾರೆ.

‘ಸಸಿಗಳಿಗೆ ನೀರುಣಿಸುವಂತೆ ಗ್ರಾಮ ಪಂಚಾಯ್ತಿಯವರಿಗೆ ಹೇಳಿದ್ದೇವೆ’ ಎಂದು ಅಥಣಿ ವಲಯ ಅರಣ್ಯ ಅಧಿಕಾರಿ ರಾಜು ಕಾಂಬಳೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.