ಸತೀಶ ಜಾರಕಿಹೊಳಿ
– ಪ್ರಜಾವಾಣಿ ಚಿತ್ರ
ಬೆಳಗಾವಿ: ‘ರಣದೀಪ್‌ಸಿಂಗ್ ಸುರ್ಜೇವಾಲಾ ಅವರು ನನ್ನನ್ನು ಸಭೆಗೆ ಕರೆದಿಲ್ಲ. ಹಾಗಾಗಿ ಬೆಂಗಳೂರಿಗೆ ಹೋಗಿ ಭೇಟಿಯಾಗುವುದಿಲ್ಲ. ಅಗತ್ಯಬಿದ್ದರೆ ನೋಡೋಣ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದರು.
ಇಲ್ಲಿ ಸೋಮವಾರ ಸುದ್ದಿಗಾರರಿಗೆ ಜತೆ ಮಾತನಾಡಿದ ಅವರು, ‘ಬೆಳಗಾವಿಯಲ್ಲಿ ಸೋಮವಾರ ಸಭೆ ನಿಗದಿಯಾಗಿದ್ದ ಕಾರಣ, ರಾಜು ಕಾಗೆ ಅವರು ಬೆಂಗಳೂರಿಗೆ ಹೋಗಿಲ್ಲ. ಮಂಗಳವಾರ ಹೋಗಿ ಸುರ್ಜೇವಾಲಾ ಭೇಟಿಯಾಗುತ್ತಾರೆ’ ಎಂದರು.
‘ಶಾಸಕರ ಸಮಸ್ಯೆಗಳು ಏನಿವೆ ಎಂದು ಕೇಳಬೇಕಿದೆ. ಹಾಗಾಗಿ ಸಭೆ ಮಾಡುತ್ತಿದ್ದಾರೆ. ಪದೇಪದೆ ಸರ್ಕಾರದ ವಿರುದ್ಧ ಏಕೆ ಮಾತನಾಡುತ್ತಿದ್ದೀರಿ ಎಂದು ಕೇಳುತ್ತಾರೆ. ಶಾಸಕರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.