ADVERTISEMENT

ಮೂಡಲಗಿ: ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2024, 16:22 IST
Last Updated 12 ಡಿಸೆಂಬರ್ 2024, 16:22 IST
ಮೂಡಲಗಿಯ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ತ್ರಿವಳಿ ಶಿಶುಗಳಿಗೆ ಜನ್ಮ ನೀಡಿದ ತಾಯಿ ಪೂಜಾ ಸುರೇಶ ಕಾಲತಿಪ್ಪಿ ಅವರೊಂದಿಗೆ ವೈದ್ಯರು
ಮೂಡಲಗಿಯ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ತ್ರಿವಳಿ ಶಿಶುಗಳಿಗೆ ಜನ್ಮ ನೀಡಿದ ತಾಯಿ ಪೂಜಾ ಸುರೇಶ ಕಾಲತಿಪ್ಪಿ ಅವರೊಂದಿಗೆ ವೈದ್ಯರು   

ಮೂಡಲಗಿ: ಮೂಡಲಗಿಯ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ಕಂಕಣವಾಡಿಯ ಪೂಜಾ ಸುರೇಶ ಕಾಲತಿಪ್ಪಿ ಗರ್ಭಿಣಿ ಮಹಿಳೆಗೆ ತ್ರಿವಳಿ ಮಕ್ಕಳ ಜನನವಾಗಿದೆ.

ಎರಡು ಗಂಡು ಒಂದು ಹೆಣ್ಣು ಮಗು ಜನಿಸಿದ್ದು, ಮೂರು ನವಜಾತು ಶಿಶುಗಳು 2 ಕೆ.ಜಿಗೂ ಅಧಿಕ ತೂಕವಿದೆ. ಮೂರು ಶಿಶುಗಳೂ ಆರೋಗ್ಯವಾಗಿವೆ. ಸ್ತ್ರೀರೋಗ ತಜ್ಞೆ ಡಾ.ಮಯೂರಿ ಕಡಾಡಿ ಅವರು ಸೀಜೇರಿಯನ್‌ ಮೂಲಕ ಹೆರಿಗೆ ಮಾಡಿಸಿದರು.

‘ಈ ತರಹ ತ್ರಿವಳಿ ಹೆರಿಗೆ ಆಗುವುದು ಅಪರೂಪದಾಗಿದೆ. ಅದರಲ್ಲೂ ಮೂರೂ ನವಜಾತ ಶಿಶುಗಳು ಆರೋಗ್ಯಪೂರ್ಣವಾಗಿವೆ ಮತ್ತು ತಾಯಿಯೂ ಆರೋಗ್ಯವಾಗಿದ್ದಾರೆ. ಗುರುವಾರ ಆಸ್ಪತ್ರೆಯಿಂದ ಮನೆಗೆ ಕಳಿಸಿದ್ದೇವೆ’ ಎಂದು ಡಾ.ಮಯೂರಿ ಮತ್ತು ಚಿಕ್ಕ ಮಕ್ಕಳ ತಜ್ಞ ಡಾ.ಮಹಾಂತೇಶ ಕಡಾಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ಡಾ.ವಿಜಯ ಬೆನಕಟ್ಟಿ, ಡಾ.ಬಸವರಾಜ ಹೊನ್ನ, ಡಾ.ಪ್ರಜ್ವಲ, ಡಾ.ಪ್ರತಿಮಾ ಗಿಣಿಮೂಗಿ ಇದ್ದರು.

ಮೂರು ಮಕ್ಕಳಿಗೆ ಜನ್ಮ ನೀಡಿದ ಪೂಜಾ ಮತ್ತು ಅವರ ಪತಿ ಸುರೇಶ ಕಾಲತಿಪ್ಪಿ ದಂಪತಿ ತ್ರಿವಳಿ ಮಕ್ಕಳ ಜನನಕ್ಕೆ ಖುಷಿಯಾಗಿದ್ದಾರೆ. ಇದು ಎರಡನೇ ಹೆರಿಗೆಯಾಗಿದ್ದು, ಅವರಿಗೆ ಈ ಮೊದಲೇ ಒಂದು ಹೆಣ್ಣು ಮಗು ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.