ADVERTISEMENT

ಕೂಲಿ ಕಾರ್ಮಿಕರ ಜಗಳ: ಒಬ್ಬರ ಕೊಲೆಯಲ್ಲಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 16:10 IST
Last Updated 15 ಅಕ್ಟೋಬರ್ 2024, 16:10 IST

ಬೈಲಹೊಂಗಲ: ಉಪಹಾರದ ಕೈಚೀಲಕ್ಕಾಗಿ ಕೂಲಿ ಕಾರ್ಮಿಕರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ಕಾರ್ಮಿಕನೊಬ್ಬನನ್ನು ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ತಾಲ್ಲೂಕಿನ ಬುಡರಕಟ್ಟಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಬುಡರಕಟ್ಟಿ ಗ್ರಾಮದ ರುದ್ರಪ್ಪ ಶಿವಬಸಪ್ಪ ಪಾಗಾದ(64) ಕೊಲೆಯಾದವರು. ಮಲ್ಲಪ್ಪ ಶಿವಶಂಕರ ಯರಗೊಪ್ಪ(42) ಕೊಲೆ ಆರೋಪಿ. ಮೃತ ರುದ್ರಪ್ಪ ತನ್ನ ಉಪಹಾರವಿದ್ದ ಕೈಚೀಲವನ್ನು ಗ್ರಾಮ ಪಂಚಾಯಿತಿ ಕಟ್ಟೆ ಮೇಲೆ ಇಟ್ಟು, ಇನ್ನೊಬ್ಬ ಕೂಲಿ ಕಾರ್ಮಿಕನನ್ನು ಕರೆತರಲು ಹೋಗಿದ್ದರು. ರುದ್ರಪ್ಪನ ಉಪಹಾರದ ಕೈಚೀಲವ ಆರೋಪಿ ಮಲ್ಲಪ್ಪ ತೆಗೆದುಕೊಂಡು ಬುಡರಕಟ್ಟಿ ರಸ್ತೆ ಮೇಲೆ ಹೊರಟಿದ್ದರು. ಆಗ ಇಬ್ಬರಿಗೂ ಮಾತಿನ ಚಕಮಕಿ ಆರಂಭವಾಗಿದೆ. ಆರೋಪಿ ಮಲ್ಲಪ್ಪ ತನ್ನ ಕೈಯಲ್ಲಿದ್ದ ಕುಡಗೋಲಿನಿಂದ ರುದ್ರಪ್ಪನ ಮುಖ, ತಲೆಗೆ ಬಲವಾಗಿ ಹೊಡೆದಿದ್ದಾನೆ. ರುದ್ರಪ್ಪನಿಗೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತನಾಗಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

 ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.