ADVERTISEMENT

ಅಥಣಿ: ವಿವಿಧೆಡೆ ಯೋಗ ಶಿಬಿರ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 15:34 IST
Last Updated 19 ಜೂನ್ 2019, 15:34 IST

ಅಥಣಿ: ‘ವಿಶ್ವ ಯೋಗ ದಿನಾಚರಣೆ ಪೂರ್ವಭಾವಿಯಾಗಿ ಜೂನ್‌ 14ರಿಂದ ಪಟ್ಟಣದಲ್ಲಿ ಹತ್ತು ಕಡೆಗಳಲ್ಲಿ ಉಚಿತವಾಗಿ ಆಯೋಜಿಸಿರುವ ಯೋಗ ಶಿಬಿರಗಳು ಯಶಸ್ವಿಯಾಗಿ ನಡೆಯುತ್ತಿವೆ’ ಎಂದು ಯೋಗ ಗುರು ಎ.ಬಿ. ಪಾಟೀಲ ತಿಳಿಸಿದರು.

ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಜೆಇ ಪ್ರೌಢಶಾಲೆ ಆವರಣದಲ್ಲಿ ಬೆಳಿಗ್ಗೆ 5.30ರಿಂದ 7ರವರೆಗೆ ಸಾರ್ವಜನಿಕರಿಗೆ ಶಿಬಿರ ನಡೆಯುತ್ತಿದೆ’ ಎಂದರು.

‘ಬೆಳಿಗ್ಗೆ 8.30ರಿಂದ 9.30ರವರೆಗೆ ಕೆಎಲ್ಇ ಸಿ.ಬಿ. ರಣಮೋಡೆ ಸಿಬಿಎಸ್‌ಇ ಪ್ರೌಢಶಾಲೆ, ಮಧ್ಯಾಹ್ನ 3ರಿಂದ 4ರವರೆಗೆ ಲಕ್ಷ್ಮಿನಾರಾಯಣ ನಗರದ ವಿವೇಕಾನಂದ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ, ಮಧ್ಯಾಹ್ನ 3.45ರಿಂದ ಸಂಜೆ 4.45ರವರೆಗೆ ವಿಕ್ರಂಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಂಜೆ 4ರಿಂದ 4.45ರವರೆಗೆ ಸತ್ವಶೀಲಾದೇವಿ ಹೆಣ್ಣು ಮಕ್ಕಳ ಪ್ರೌಢಶಾಲೆ, ಸಂಜೆ 4.30ರಿಂದ 5.15ರವರೆಗೆ ಸತ್ತಿ ರಸ್ತೆಯ ಅಥಣಿ ವಿದ್ಯಾವರ್ಧಕ ಸಂಸ್ಥೆಯ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ, ಸಂಜೆ 4.30ರಿಂದ 5.30ರವರೆಗೆ ಜೆಎ ಪ್ರೌಢಶಾಲೆ, ಸಂಜೆ 4.30ರಿಂದ 5.30ರವರೆಗೆ ಜೆಎ ಇಂಗ್ಲಿಷ್ ಶಾಲೆ, ಸಂಜೆ 5ರಿಂದ 6ರವರೆಗೆ ಹುಡ್ಕೊ ಕಾಲೊನಿಯ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಇಂಗ್ಲಿಷ್‌ ಶಾಲೆಯಲ್ಲಿ ಶಿಬಿರ ನಡೆಸಲಾಗುತ್ತಿದೆ. ನಿಯಮಿತ ಯೋಗಾಭ್ಯಾಸದಿಂದ ಇರುವ ಅನುಕೂಲಗಳ ಕುರಿತು ತಿಳಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಯೋಗ ಶಿಕ್ಷಕರಾದ ಎಸ್.ಕೆ. ಹೋಳಪ್ಪನವರ, ಡಾ.ವಿ.ಎಂ. ಚಿಂಚೋಳಿಮಠ, ಶಿವಪುತ್ರ ಯಾದವಾಡ, ಅಪ್ಪಾಸಾಹೇಬ ತಾಂಬಟ, ವಿಶಾಲಾಕ್ಷಿ ಅಂಬಿ, ಸುರೇಖಾ ತಾಂಬಟ, ರೋಹಿಣಿ ಯಾದವಾಡ, ಗೀತಾ ದಸವಂತ, ಪ್ರೇಮಾ ಬುಟಾಳಿ, ಎಂ.ಡಿ. ಬಸಗೌಡರ, ಎಂ.ಎ. ಕೋಳಲಿ, ಆರ್.ಎಂ. ಶಿಂಧೆ, ವೈಶಾಲಿ ಮಠಪತಿ, ಎಸ್.ಎಂ. ಕಾಂಬಳೆ, ಎಸ್.ಬಿ. ಇಂಗಳೆ, ಜಿ.ಐ. ಪಾಟೀಲ, ನಾಗರಾಜ ದಾಸರ, ಅನುರಾಧಾ ದಾಸರ, ಡಾ.ಜಗದೀಶ ಮಿರಜಕರ ಶಿಬಿರ ನಡೆಸಿಕೊಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.