ಅಥಣಿ: ‘ಬಾಬಾ ರಾಮದೇವ್ ಸ್ಥಾಪಿಸಿರುವ ಪತಂಜಲಿ ಯೋಗ ಪೀಠ ದೇಶಕ್ಕೆ ಅಪಾರ ಕೊಡುಗೆ ನೀಡಿದೆ’ ಎಂದು ಇಲ್ಲಿನ ಪತಂಜಲಿ ಯೋಗ ಪೀಠದ ಪ್ರಭಾರಿ ಎಸ್.ಕೆ. ಹೊಳೆಪ್ಪನವರ ಹೇಳಿದರು.
ಸೋಮವಾರ ನಡೆದ ಯೋಗಪೀಡದ 25ನೇ ಸಂಸ್ಥಾನ ದಿನಾಚರಣೆ ಹಾಗೂ ಹರಿದ್ವಾರದ ಶಿಕ್ಷಣ ಸಂಸ್ಕಾರ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಪೀಠದಿಂದ ಜನರಿಗೆ ಉಚಿತ ಯೋಗ ತರಬೇತಿ ನೀಡುವ ಮೂಲಕ ಆರೋಗ್ಯಯುತ ಭಾರತ ನಿರ್ಮಾಣಕ್ಕೆ ಪಣ ತೊಡಲಾಗಿದೆ’ ಎಂದರು.
ಹರಿದ್ವಾರದಲ್ಲಿ ನಡೆದ ಯೋಗ ಶಿಬಿರದಲ್ಲಿ ಪಾಲ್ಗೊಂಡ ಮುಖ್ಯಶಿಕ್ಷಕ ಶಿವಾನಂದ ಮಾಲಗಾವಿ ಅನುಭವ ಹಂಚಿಕೊಂಡರು. ಡಾ.ಆರ್.ಎಸ್. ದೊಡ್ಡನಿಂಗಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು.
ಯೋಗ ಶಿಕ್ಷಕಿ ಅನುರಾಧಾ ದಾಸರ, ಶಿಬಿರಾರ್ಥಿಗಳಾದ ವಿದ್ಯಾ ಶಿರಗೂರ, ದಿವ್ಯಾ ಹೊಳೆಪ್ಪನವರ, ಮಹಾದೇವಿ ಬೆಟಸೂರ, ಮಂಜುಳಾ ಪೋಲಿಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.