ADVERTISEMENT

ಅವಕಾಶ ಸದ್ಬಳಕೆ: ಅಂಗವಿಕಲರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 14:21 IST
Last Updated 19 ಜುಲೈ 2019, 14:21 IST
ಬೆಳಗಾವಿಯಲ್ಲಿ ಎಪಿಡಿ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ ಯುವ ಕೌಶಲ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಡಿ.ವೈ. ಹೆಳವರ ಹಾಗೂ ಅತಿಥಿಗಳು ಉದ್ಘಾಟಿಸಿದರು
ಬೆಳಗಾವಿಯಲ್ಲಿ ಎಪಿಡಿ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ ಯುವ ಕೌಶಲ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಡಿ.ವೈ. ಹೆಳವರ ಹಾಗೂ ಅತಿಥಿಗಳು ಉದ್ಘಾಟಿಸಿದರು   

ಬೆಳಗಾವಿ: ‘ಅಂಗವಿಕಲರಿಗೆ ಉದ್ಯೋಗ ಸೇರಿದಂತೆ ಹಲವು ಅವಕಾಶಗಳಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಡಿ.ವೈ. ಹೆಳವರ ತಿಳಿಸಿದರು.

ರಾಮತೀರ್ಥ ನಗರದ ಎಪಿಡಿ (ದಿ ಅಸೋಸಿಯೇಶನ್ ಆಫ್‌ ಪೀಪಲ್ ವಿತ್ ಡಿಸೆಬಿಲಿಟಿ) ಸಂಸ್ಥೆಯಲ್ಲಿ ಶುಕ್ರವಾರ ನಡೆದ ವಿಶ್ವ ಯುವ ಕೌಶಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಗವಿಕಲರು ಸೂಕ್ತ ಕೌಶಲ ಬೆಳೆಸಿಕೊಂಡು ಉದ್ಯೋಗ ಪಡೆದುಕೊಂಡರೆ ಒಳ್ಳೆಯ ಗಳಿಕೆಯೊಂದಿಗೆ ಉತ್ತಮ ಜೀವನ ಸಾಗಿಸಬಹುದು. ಸ್ವಾವಲಂಬಿಯಾಗಬಹುದು’ ಎಂದರು.

ADVERTISEMENT

ಎಪಿಸಿ ಸಂಸ್ಥೆ ವಿಭಾಗೀಯ ವ್ಯವಸ್ಥಾಪಕ ಬಾಬು ನೇಜಕರ ಸಂಸ್ಥೆಯಲ್ಲಿ ನಡೆಯುವ ವಿವಿಧ ತರಬೇತಿ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.

ಶ್ರವಣದೋಷವುಳ್ಳ ಹೆಣ್ಣು ಮಕ್ಕಳ ಸರ್ಕಾರಿ ಶಾಲೆ ಅಧೀಕ್ಷಕ ಬಿ.ಆರ್. ಬನಶಂಕರಿ, ಅಧ್ಯಕ್ಷತೆ ವಹಿಸಿದ್ದ ಎಪಿಡಿ ಸಹಾಯಕ ನಿರ್ದೇಶಕ ರಮೇಶ ಗೊಂಗಡಿ ಮಾತನಾಡಿದರು. ಕೆಎಲ್‌ಇ ಆಸ್ಪತ್ರೆಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಂಕೇತ ಮಮದಾಪುರ ಅನುಭವ ಹಂಚಿಕೊಂಡರು.

ಶ್ರವಣದೋಷವುಳ್ಳ ಹೆಣ್ಣು ಮಕ್ಕಳು ನೃತ್ಯ ಪ್ರದರ್ಶಿಸಿ ಗಮನಸೆಳೆದರು. ಕೌಶಲ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಶ್ರೀಕೃಪಾ ಪ್ರತಿಷ್ಠಾನದ ಸಂಸ್ಥಾಪಕಿ ಸುರೇಖಾ ಕೋರಿಶೆಟ್ಟರ, ಜಿಲ್ಲಾ ಕೌಶಲ ಕೋಶದ ರಮೇಶ ಬೈರಾಗಿ, ಸಂಜೀವ ತಿಗಣಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ನಾಗರತ್ನಾ, ಎಪಿಡಿಯ ಸಂತೋಷ ಹಳಮನಿ, ಎಂ.ಕೆ. ಬಸವರಾಜು, ಎಸ್‌.ಡಿ. ಪ್ರಕಾಶ ಇದ್ದರು.

ವೈ. ಅನುಪಮಾ ಸ್ವಾಗತಿಸಿದರು. ಚನ್ನಪ್ಪ ಕುಂಬಾರ ನಿರೂಪಿಸಿದರು. ಜಿ.ಎಂ. ಸಚೇತ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.