ADVERTISEMENT

ಅಂಬೇಡ್ಕರ್‌ ಸಮಾಜ ಪಕ್ಷ ಪ್ರಣಾಳಿಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 20:02 IST
Last Updated 30 ಮಾರ್ಚ್ 2018, 20:02 IST

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಅಂಬೇಡ್ಕರ್ ಸಮಾಜಪಕ್ಷ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದ್ದು, ಮೊದಲ ಹಂತದಲ್ಲಿ 25 ಅಭ್ಯರ್ಥಿಗಳ ಪಟ್ಟಿ ಹಾಗೂ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ ಎಂದು ಪಕ್ಷದ ರಾಜ್ಯ ಉಸ್ತುವಾರಿ ಭಾಯ್ ನರೇಶ್ ಸಿಂಧು ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡುವ ಸರ್ಕಾರ ಸ್ಥಾಪಿಸುವ ಉದ್ದೇಶದಿಂದ ಪಕ್ಷ ಸ್ಥಾಪಿಸಲಾಗಿದೆ’ ಎಂದರು.

ಪ್ರಣಾಳಿಕೆಯ ಪ್ರಮುಖ ಅಂಶಗಳು:

ADVERTISEMENT

* ಹಿರಿಯರಿಗೆ, ಅಂಗವಿಕಲರಿಗೆ -₹2,000, ವಿಧವೆಯರಿಗೆ ₹ 5,000 ಮಾಸಾಶನ

* 14 ವರ್ಷ ಒಳಗಿನ ಬಡ ಮಕ್ಕಳಿಗೆ ಉಚಿತ–ಕಡ್ಡಾಯ ಶಿಕ್ಷಣ

* 60 ವರ್ಷ ಮೇಲ್ಪ‌ಟ್ಟವರಿಗೆ ಉಚಿತ ಬಸ್‌ ಪ್ರಯಾಣ

* ರೈತರ ಬೆಳೆಗಳಿಗೆ ಉಚಿತ ಬೆಳೆ ವಿಮೆ ಸೌಲಭ್ಯ

* ರೈತರ ಕೊಳವೆ ಬಾವಿಗಳು ವಿಫಲವಾದರೆ ₹ 5 ಲಕ್ಷ ಪರಿಹಾರ

* ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ₹1 ಲಕ್ಷ ಸಹಾಯ

* ಖಾಸಗಿ ಶಾಲೆಗಳಿಗೆ ಕಡಿವಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.