ADVERTISEMENT

ಆಗಸ ಬಾಯಿಬಿಟ್ಟಂತೆ ಸುರಿದ ಮಳೆ...

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2011, 20:35 IST
Last Updated 22 ಏಪ್ರಿಲ್ 2011, 20:35 IST

 ಬೆಂಗಳೂರು: ಶುಕ್ರವಾರ ಸಂಜೆ ಆಗ ಸವೇ ಬಾಯಿಬಿಟ್ಟಂತೆ ಸುರಿದ ಧಾರಾ ಕಾರ ಮಳೆಯಿಂದಾಗಿ ನಗರದ ಜನ ಜೀವನ ಅಸ್ತವ್ಯಸ್ತಗೊಂಡಿತು. 

 ಕೆಲವು ಬಡಾವಣೆಗಳಲ್ಲಿ ನೀರು ನುಗ್ಗಿ ಹಾನಿಯಾಯಿತು. ಹಲವೆಡೆ ಮರ ಗಳು, ಮರದ ಟೊಂಗೆಗಳು ರಸ್ತೆಯ ಮೇಲೆ ಉರುಳಿ ಬಿದ್ದಿದ್ದರಿಂದ ವಾಹನ ಸಂಚಾರದಲ್ಲಿ ತೀವ್ರ ವ್ಯತ್ಯಯ ವಾಗಿತ್ತು. 

 ಒಂದು ಗಂಟೆಗೂ ಹೆಚ್ಚು ಕಾಲ ರಭಸದಿಂದ ಸುರಿಯಿತು. ಒಟ್ಟು 8 ಸೆಂಟಿ ಮೀಟರ್‌ನಷ್ಟು ಮಳೆ ಆಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಗರದ 14 ಭಾಗಗಳಲ್ಲಿ ಮರ ಗಳ ಟೊಂಗೆಗಳು ಬಿದ್ದಿದ್ದರಿಂದ ಸಾಕಷ್ಟು ಸಮಯ ವಾಹನ ಸಂಚಾ ರದಲ್ಲಿ ತೀವ್ರ ವ್ಯತ್ಯಯವಾಗಿತ್ತು. ಕಾವೇರಿ ಜಂಕ್ಷನ್ ಬಳಿ ಮರವೊಂದು ಬಿದ್ದ ಪರಿಣಾಮ ಅರ್ಧ ಗಂಟೆ ಕಾಲ ಟ್ರಾಫಿಕ್ ಜಾಮ್ ಉಂಟಾದ್ದರಿಂದ ವಾಹನ ಸವಾರರು ಪರದಾಡ ಬೇಕಾಯಿತು.

ಮೈಸೂರು ರಸ್ತೆಯ ನಾಯಂಡಹಳ್ಳಿ, ಮಾಗಡಿ ರಸ್ತೆ, ಕೋರ ಮಂಗಲ, ಶ್ರೀನಿವಾಸನಗರ, ಅಶೋಕ ನಗರ, ವಿದ್ಯಾಪೀಠ ವೃತ್ತ, ವಿಲ್ಸನ್ ಗಾರ್ಡನ್,ಚಾಮರಾಜಪೇಟೆ, ಕೆ. ಆರ್. ಮಾರುಕಟ್ಟೆ, ಬಳ್ಳಾರಿ ರಸ್ತೆ, ಶೇಷಾದ್ರಿಪುರದ ರೈಲ್ವೆ ಸೇತುವೆ ರಸ್ತೆ, ಕಿನೊ ಥಿಯೇಟರ್, ಊರ್ವಶಿ ಥಿಯೇಟರ್ ಹತ್ತಿರ, ಯುಬಿ ಸಿಟಿ ರಸ್ತೆ, ಎಂ.ಜಿ.ರಸ್ತೆ, ಹಲಸೂರು, ಇಂದಿರಾನಗರ ಸೇರಿದಂತೆ ಇನ್ನಿತರ ಹಲವು ಭಾಗಗಳಲ್ಲಿ ವಿಪರೀತ ಮಳೆ ಬಿದ್ದ ಪರಿಣಾಮ ರಸ್ತೆಗಳಲ್ಲಿ ಮೊಳ ಕಾಲವರೆಗೂ ನೀರು ಹರಿಯುತ್ತಿತ್ತು.
2ನೇ ಪುಟ ನೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.