ADVERTISEMENT

ಆರು ಜನ ಸುಲಿಗೆಕೋರರ ಬಂಧನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2014, 19:58 IST
Last Updated 18 ಫೆಬ್ರುವರಿ 2014, 19:58 IST
ಆನೇಕಲ್‌ ತಾಲ್ಲೂಕಿನ ಜಿಗಣಿ, ಎಲೆಕ್ಟ್ರಾನಿಕ್‌ ಸಿಟಿ ಕೈಗಾರಿಕಾ ಪ್ರದೇಶಗಳಲ್ಲಿ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದ ಆರು ಜನ ದುಷ್ಕರ್ಮಿಗಳನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ
ಆನೇಕಲ್‌ ತಾಲ್ಲೂಕಿನ ಜಿಗಣಿ, ಎಲೆಕ್ಟ್ರಾನಿಕ್‌ ಸಿಟಿ ಕೈಗಾರಿಕಾ ಪ್ರದೇಶಗಳಲ್ಲಿ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದ ಆರು ಜನ ದುಷ್ಕರ್ಮಿಗಳನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ   

ಆನೇಕಲ್‌: ತಾಲ್ಲೂಕಿನ ಜಿಗಣಿ ಹಾಗೂ ಎಲೆಕ್ಟ್ರಾನಿಕ್‌ ಸಿಟಿಯ ಕೈಗಾ­ರಿಕಾ ಪ್ರದೇಶಗಳಲ್ಲಿ ಸಾರ್ವಜನಿ­ಕ­ರನ್ನು ಸುಲಿಗೆ ಮಾಡುತ್ತಿದ್ದ ಆರು ಜನ ದುಷ್ಕರ್ಮಿಗಳನ್ನು ಜಿಗಣಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಆರೋಪಿಗಳನ್ನು ಬೆಂಗಳೂರಿನ ಹೊಂಗ­ಸಂದ್ರದ ಬಾಲಾಜಿ ಬಡಾವ­ಣೆಯ ಎಂ. ಪ್ರತಾಪ್‌ (20), ರಾಜೇಂದ್ರ ಪ್ರಸಾದ್‌ (18), ರಂಜಿತ್ ಕುಮಾರ್‌ ಅಲಿಯಾಸ್‌ ಬಂಬು (19), ಅಜಯ್‌ಕುಮಾರ್‌ (19), ವಿರಾ­ಟ್‌ನಗರದ ಶಂಕರ್‌ (19) ಮತ್ತು ಮಾಸ್ತೇನಹಳ್ಳಿ ದಿನ್ನೆಯ ಡ್ರೈವರ್ ಶ್ರೀಕಾಂತ್‌ (19) ಎಂದು ಗುರುತಿಸಲಾಗಿದೆ.

‘ಆರೋಪಿ­ಗಳಾದ ಜೋಸೆಫ್‌, ವೆಂಕಟೇಶ್‌ ಮತ್ತು ಚಂದ್ರಶೇಖರ್ ತಲೆ ಮರೆಸಿ­ಕೊಂಡಿ­ದ್ದಾರೆ. ಅವರನ್ನು ಶೀಘ್ರವೇ ಪತ್ತೆಹಚ್ಚಲಾಗುವುದು’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ರಮೇಶ್‌ ಬಾನೋಟ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.