ADVERTISEMENT

ಆರೋಗ್ಯಶ್ರೀ ವಿಸ್ತರಣೆಗೆ ಕರೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 19:30 IST
Last Updated 6 ಜನವರಿ 2012, 19:30 IST

ಬೆಂಗಳೂರು: ಬಿಬಿಎಂಪಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ ವಾಜಪೇಯಿ ಆರೋಗ್ಯ ಶ್ರೀ ಯೋಜನೆ ವ್ಯಾಪ್ತಿಗೆ ಮಂಗಳಮುಖಿಯರು ಮಾತ್ರವಲ್ಲದೇ ಲಿಂಗತ್ವ ಅಲ್ಪಸಂಖ್ಯಾತರನ್ನೂ ತರಬೇಕೆಂದು ಸಂಗಮ ಸಂಸ್ಥೆಯ ಕಾರ್ಯಸಂಯೋಜಕಿ ಅಕೈ ಪದ್ಮಶಾಲಿ ಒತ್ತಾಯಿಸಿದ್ದಾರೆ.

ಈ ಯೋಜನೆಯ ವ್ಯಾಪ್ತಿಗೆ ಕೇವಲ ಮಂಗಳಮುಖಿಯರು ಮಾತ್ರವೇ ಒಳಪಡುತ್ತಾರೆ. ಇದು ಒಂದು ಸಮುದಾಯಕ್ಕೆ ಮಾತ್ರ ಅನ್ವಯವಾಗುತ್ತದೆ. ಉಳಿ ದವರು ಯೋಜನೆಯಿಂದ ವಂಚಿತರಾಗು ತ್ತಾರೆ. ಲಿಂಗತ್ವ ಅಲ್ಪಸಂಖ್ಯಾತರಲ್ಲಿ (ಕೋಥಿ, ಹಿಜ್ರಾ, ಜೋಗಪ್ಪ) ಸಹ ಸೇರಿ ಸಬೇಕು. ಇಲ್ಲದಿದ್ದರೆ ಬಿಬಿಎಂಪಿ ವಿರುದ್ಧ ಪ್ರತಿಭಟನೆ ಮಾಡುವುದಕ್ಕೆ ಸಿದ್ಧ ಎಂದು ಅವರು ಹೇಳಿದರು.

`ನಮಗೆ  ಸರ್ಕಾರದ ಯಾವುದೇ ಯೋಜನೆಗಳು ಲಭ್ಯವಾಗುತ್ತಿಲ್ಲ. ಉಳಿದವರ ಹಾಗೇ ನಾವು ಸಹ ಮನುಷ್ಯರು.ನಮಗೂ ಈ ಯೋಜನೆಗಳ ಪ್ರಯೋಜನ ಸಿಗಲಿ.  ಸರ್ಕಾರ ನಮ್ಮ ಅಭಿವೃದ್ಧಿಗೆ ಮುಂದಾಗಿದೆ.ಆದರೆ ಬಿಬಿಎಂಪಿಯವರ ಧೋರಣೆ ನಮಗೆ ಬಹಳ ಅಸಮಾಧಾನ ತಂದಿದೆ. ನಾವು ಸಹ ಬಡವರು, ನಮ್ಮದೇ ಆದ ಸ್ವಂತ ಮನೆಯಿಲ್ಲ. ಯಾವುದೇ ಕೆಲಸವಿಲ್ಲ. ಹೀಗಾಗಿ ನಾವು ಲೈಂಗಿಕ ಕಾರ್ಯಕರ್ತೆಯರಾಗಿ ಗುರುತಿಸಿಕೊಂಡಿದ್ದೇವೆ. ತುಂಬಾ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಲೈಂಗಿಕ ವೃತ್ತಿ, ಭಿಕ್ಷಾಟನೆ ಬಿಟ್ಟರೆ ನಮಗೆ ಬೇರೆ ಯಾವ ಉದ್ಯೋಗದಲ್ಲೂ ಅವಕಾಶವಿಲ್ಲವಾಗಿದೆ. ನಮ್ಮ ಜೀವನಕ್ಕೂ ಸರಿಯಾದ ಸೌಕರ್ಯ ಕಲ್ಪಿಸಿಕೊಟ್ಟರೆ ನಾವು ಈ ಸಮಾಜದಲ್ಲಿ ನೆಮ್ಮದಿಯಾಗಿ ಜೀವನ ಸಾಗಿಸಬಹುದು~ ಎಂದು `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.