ADVERTISEMENT

ಉಚಿತ ಉದ್ಯೋಗ, ಶಿಕ್ಷಣ ತರಬೇತಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 19:59 IST
Last Updated 11 ಜುಲೈ 2013, 19:59 IST

ಬೆಂಗಳೂರು: ರಮಣ ಮಹರ್ಷಿ ಅಂಧರ ಪರಿಷತ್ತು 2013ನೇ ಸಾಲಿನ ಎಲ್ಲ ರೀತಿಯ ಅಂಗವಿಕಲರಿಗೆ 2 ವರ್ಷಗಳ ಉಚಿತ ಶಿಕ್ಷಣ ಮತ್ತು ಉದ್ಯೋಗ ತರಬೇತಿಯನ್ನು ಪ್ರಾರಂಭಿಸಿರುವುದಾಗಿ ತಿಳಿಸಿದೆ.

1 ರಿಂದ 10ನೇ ತರಗತಿಯವರೆಗಿನ ಅಂಧ ಮಕ್ಕಳಿಗೆ ಪಠ್ಯ ಶಿಕ್ಷಣ, ಕಂಪ್ಯೂಟರ್ ತರಬೇತಿ ಶಿಕ್ಷಣ, ಶಾಸ್ತ್ರೀಯ ಸಂಗೀತ, ನೃತ್ಯ, ತೋಟಗಾರಿಕೆ, ಹೈನುಗಾರಿಕೆ, ಔದ್ಯೋಗಿಕ ತರಬೇತಿಯನ್ನು ನೀಡಲಾಗುವುದು.

16 ರಿಂದ 35 ವರ್ಷ ವಯೋಮಾನದ ಶ್ರವಣ ಮತ್ತು ದೃಷ್ಟಿ ನ್ಯೂನತೆ ಇರುವವರಿಗೆ ಉಚಿತ ವಸತಿಯೊಂದಿಗೆ ಕೃಷಿ ಆಧಾರಿತ ಔದ್ಯೋಗಿಕ ತರಬೇತಿಯನ್ನು ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಳಾಸ: ಸಿ.ಎ. 1-ಬಿ, 3ನೇ ಅಡ್ಡ ರಸ್ತೆ, 3ನೇ ಹಂತ, ರಾಗಿ ಗುಡ್ಡದ ಹತ್ತಿರ, ಜೆ.ಪಿ.ನಗರ. ಮಾಹಿತಿಗಾಗಿ: 95911 01085.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.