ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ ದಂಡ ವಸೂಲಿ ಮಾಡಿ ರಸೀದಿ ನೀಡದೆ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಬಸವನಗುಡಿ ಸಂಚಾರ ಠಾಣೆ ಎಎಸ್‌ಐ ರಮೇಶ್ ಅವರನ್ನು ಹಿರಿಯ ಅಧಿಕಾರಿಗಳು ಶನಿವಾರ ಅಮಾನತು ಮಾಡಿದ್ದಾರೆ.
ಡಿವಿಜಿ ರಸ್ತೆಯ ವಾಹನ ನಿಲುಗಡೆ ನಿರ್ಬಂಧಿತ ಸ್ಥಳದಲ್ಲಿ ನಿಂತಿದ್ದ ವಾಹನಗಳನ್ನು ರಮೇಶ್ ಅವರು ‘ಟೈಗರ್’ ವಾಹನದ ಮೂಲಕ ಶುಕ್ರವಾರ ಠಾಣೆಗೆ ಎಳೆದುಕೊಂಡು ಬಂದಿದ್ದರು.
ನಂತರ ಠಾಣೆಗೆ ಬಂದ ಆ ವಾಹನಗಳ ಮಾಲೀಕರಿಂದ ದಂಡ ಪಡೆದಿದ್ದ ರಮೇಶ್ ಅವರು ಪ್ರತಿಯಾಗಿ ರಸೀದಿ ಕೊಟ್ಟಿರಲಿಲ್ಲ. ಈ ಸಂಬಂಧ ಹಾಲಸ್ವಾಮಿ ಎಂಬುವರು ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಎಸ್.ಗಿರೀಶ್ ಅವರಿಗೆ ದೂರು ಕೊಟ್ಟಿದ್ದರು.
ಈ ದೂರಿನ ಬಗ್ಗೆ ತನಿಖೆ ನಡೆಸಿದ ಗಿರೀಶ್ ಅವರು ರಮೇಶ್ ಅವರನ್ನು ಕರ್ತವ್ಯಲೋಪದ ಆರೋಪದ ಮೇಲೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.