ADVERTISEMENT

ಎಚ್‌ಐವಿ ಪೀಡಿತ ಮಕ್ಕಳಿಗೆ 57 ಲಕ್ಷ ರೂ ದೇಣಿಗೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST

ಬೆಂಗಳೂರು: ಟಿಮ್‌ಕೆನ್ ಇಂಡಿಯಾ ಸಂಸ್ಥೆಯು ಎಚ್‌ಐವಿ ಪೀಡಿತ ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿರುವ `ಸ್ನೇಹ~ ಚಾರಿಟಬಲ್ ಟ್ರಸ್ಟ್‌ಗೆ 57 ಲಕ್ಷ ರೂಪಾಯಿ ದೇಣಿಗೆ ನೀಡಿದೆ.

ಎಚ್‌ಐವಿ ಪೀಡಿತ ಮಕ್ಕಳಿಗೆ ಟ್ರಸ್ಟ್ ನೆಲೆ ಒದಗಿಸುವುದರ ಮೂಲಕ ರಕ್ಷಣೆ ನೀಡುತ್ತಿದೆ. 4 ರಿಂದ 12 ವಯೋಮಾನದ 100ಕ್ಕೂ ಹೆಚ್ಚು ಎಚ್‌ಐವಿ ಪೀಡಿತರಿಗೆ ವಸತಿ ನೀಡುತ್ತಿದೆ. ಅವರಿಗೆ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತಿದೆ.

ಸುಮಾರು 200 ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸಂಸ್ಥೆಗೆ ನೆರವು ನೀಡಲಿದೆ. ವೃತ್ತಿಪರ ತರಬೇತಿ, ಅಕಾಡೆಮಿ ಶಿಕ್ಷಣ ಮೊದಲಾದ ಜೀವನಮೌಲ್ಯಗಳನ್ನು ಕಲಿಸಿಕೊಡುತ್ತಿದೆ. ಟ್ರಸ್ಟ್ ಮಕ್ಕಳಿಗೆ ಬಣ್ಣದ ಬದುಕಿನ ಹೊಸ ನಿರ್ದೇಶನ ನೀಡಲಿದೆ.

ಟಿಮ್‌ಕೆನ್ ಪ್ರತಿಷ್ಠಾನದ ನಿಧಿಯನ್ನು ಹುಡುಗರು ಮತ್ತು ಹುಡುಗಿಯರ ಹಾಸ್ಟೆಲ್ ನಿರ್ಮಾಣಕ್ಕೆ ಬಳಸಲಿದೆ. ಕಂಪೆನಿ, ಸ್ನೇಹಗ್ರಾಮಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಿದೆ.

ಟಿಮ್‌ಕೆನ್ ಸಹಾಯಹಸ್ತ ನೀಡಿರುವುದನ್ನು ಶ್ಲಾಘಿಸಿರುವ ಟ್ರಸ್ಟ್‌ನ ನಿರ್ದೇಶಕ ಫಾದರ್ ಮ್ಯೋಥ್ಯೂ, `ಟಿಮ್‌ಕೆನ್‌ನಂಥ ಕಾರ್ಪೊರೇಟ್ ಸಂಸ್ಥೆಯು ಸಾಮಾಜಿಕ ಜವಾಬ್ದಾರಿಯನ್ನು ಗಣನೆಗೆ ತೆಗೆದುಕೊಂಡು ಟ್ರಸ್ಟ್‌ಗೆ ಸಹಾಯ ನೀಡುತ್ತಿರುವುದು ಸಂತಸದ ಸಂಗತಿ~ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.