ಬೆಂಗಳೂರು: `ರಾಜ್ಯದಲ್ಲಿ ಮತ್ತೆ ಕಾಣಿಸಿಕೊಂಡಿರುವ ಎಚ್1ಎನ್1 ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು~ ಎಂದು ಶಾಸಕ ನೆ.ಲ. ನರೇಂದ್ರಬಾಬು ಆಗ್ರಹಿಸಿದ್ದಾರೆ.
`ಆರೋಗ್ಯ ಇಲಾಖೆ ವರದಿ ಪ್ರಕಾರ ರಾಜ್ಯದಲ್ಲಿ ಮೂರು ಮಂದಿ ಮೃತಪಟ್ಟಿದ್ದರೆ, ಬಿಬಿಎಂಪಿ ಪ್ರಕಾರ 9 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಯಾವುದು ನಿಜ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಎರಡು ವರ್ಷಗಳ ಹಿಂದೆ ರಾಜ್ಯದಲ್ಲಿ ಈ ಕಾಯಿಲೆ ಕಾಣಿಸಿಕೊಂಡಿತ್ತು. ಆಗ ಸಂಪೂರ್ಣ ನಿಯಂತ್ರಣ ಮಾಡಿದ್ದರೆ ಈಗ ಸಮಸ್ಯೆ ಆಗುತ್ತಿರಲಿಲ್ಲ.
2009ರಲ್ಲಿಯೇ ಈ ಕಾಯಿಲೆಗೆ ಔಷಧಿ ಕೊರತೆ ಇದೆ ಎಂಬುದು ಬೆಳಕಿಗೆ ಬಂದಿತ್ತು. ಸ್ಥಾನೀಯವಾಗಿ ಔಷಧಿ ಲಭ್ಯವಿದ್ದರೂ ಅದನ್ನು ಸರ್ಕಾರ/ಬಿಬಿಎಂಪಿ ಆಸ್ಪತ್ರೆಗಳಲ್ಲಿ ಸಂಗ್ರಹಿಸಿ ಜನರಿಗೆ ಒದಗಿಸಲು ಇರುವ ತೊಡಕು ಏನು. ಈ ಬಗ್ಗೆ ಆರೋಗ್ಯ ಇಲಾಖೆ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಉತ್ತರಿಸಬೇಕು. ಜತೆಗೆ ಕಾಯಿಲೆ ಬಗ್ಗೆ ಜನರಲ್ಲಿ ಎಚ್ಚರಿಕೆ, ಜಾಗೃತಿ, ಅರಿವು ಮೂಡಿಸಬೇಕು~ ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.