ADVERTISEMENT

ಒಕ್ಕಲಿಗರದ್ದೂ ಪ್ರಮುಖ ಪಾತ್ರ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 19:30 IST
Last Updated 20 ಮಾರ್ಚ್ 2012, 19:30 IST

ಬೆಂಗಳೂರು: `ಬಿಜೆಪಿ ಅಧಿಕಾರಕ್ಕೆ ಬರಲು ಕೇವಲ ಲಿಂಗಾಯತ ಸಮುದಾಯದ ಮತಗಳು ಮಾತ್ರ ಕಾರಣವಲ್ಲ. ರಾಜ್ಯದಲ್ಲಿನ ಒಕ್ಕಲಿಗರೂ ಸೇರಿದಂತೆ ಬಹುಸಂಖ್ಯಾತ ಹಿಂದುಳಿದ ವರ್ಗಗಳ ಹಾಗೂ ಪರಿಶಿಷ್ಟ ಜಾತಿಗಳ ಜನತೆಯ ಮತಗಳೂ ಸರ್ಕಾರ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿವೆ~ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ಎ.ಕೇಶವಮೂರ್ತಿ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೇವಲ ಲಿಂಗಾಯತ ಸಮುದಾಯದಿಂದ ಮಾತ್ರ ಬಿಜೆಪಿ ಪಕ್ಷ ಚುನಾವಣೆಯಲ್ಲಿ ಆರಿಸಿ ಬಂದಿರುವಂತೆ ವರ್ತಿಸುತ್ತಿದ್ದಾರೆ. ಅವರೊಂದಿಗೆ ಬೆಳಗಾವಿಯ ಸಂಸದ ಸುರೇಶ್ ಅಂಗಡಿಯವರೂ ದನಿಗೂಡಿಸಿದ್ದಾರೆ. ಸದಾನಂದಗೌಡರನ್ನು ಮುಖ್ಯಮಂತ್ರಿ ಮಾಡಿದ್ದು ಲಿಂಗಾಯತರು ಎಂಬ ಸುರೇಶ್ ಅಂಗಡಿಯವರ ಹೇಳಿಕೆ ಖಂಡನೀಯ~ ಎಂದರು.

`ಕೇವಲ ಲಿಂಗಾಯತರ ಮತಗಳಿಂದ ಮಾತ್ರ ಗೆದ್ದು ಬಂದಿದ್ದೇವೆ ಎಂದು ಬೀಗುತ್ತಿರುವ ಯಡಿಯೂರಪ್ಪ ಹಾಗೂ ಸುರೇಶ್ ಅಂಗಡಿ ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಸಮಿತಿಯು ಕಾರ್ಯಕ್ರಮಗಳನ್ನು ಬಹಿಷ್ಕರಿಸಲಿದೆ~ ಎಂದು ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.