ADVERTISEMENT

ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 31 ಜುಲೈ 2012, 19:30 IST
Last Updated 31 ಜುಲೈ 2012, 19:30 IST
ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಾಣ
ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಾಣ   

ಕೆಂಗೇರಿ: `ಗುಡಿಸಲುಮುಕ್ತ ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿದ್ದು, ಕಡಿಮೆ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲು ವಸತಿ ಇಲಾಖೆ ಬದ್ಧ~ ಎಂದು ವಸತಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.

ನಾಯಂಡನಹಳ್ಳಿಯಲ್ಲಿ ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿಯು ನಿರ್ಮಿಸಿರುವ ವಸತಿ ಮನೆಗಳ ಫಲಾನುಭವಿಗಳು ಇತ್ತೀಚೆಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಪಾಲಿಕೆ ಮಾಜಿ ಉಪಮೇಯರ್ ಲಕ್ಷ್ಮಿನಾರಾಯಣ, ಪಾಲಿಕೆ ಸದಸ್ಯೆ ರಾಜೇಶ್ವರಿ ಬೆಳಗೋಡ್, ವಿಶ್ವನಾಥಗೌಡ, ಕೊಳಚೆ ನಿರ್ಮೂಲನ ಮಂಡಳಿಯ ನಿರ್ದೇಶಕ ಕೋದಂಡರಾಮ, ಗುತ್ತಿಗೆದಾರ ರಾಧಾಕೃಷ್ಣ, ಮುಖಂಡರಾದ ಕೆ.ಮರಿಯಪ್ಪ, ಶಿವಕಾಂತಪ್ಪ, ಅಂಜುಮಣಿ ಉಪಸ್ಥಿತರಿದ್ದರು.ಬಡ ಮಹಿಳೆಯರಿಗೆ ಸೀರೆಯನ್ನು ಉಚಿತವಾಗಿ ವಿತರಿಸಲಾಯಿತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.