ಬೆಂಗಳೂರು: 1ರಿಂದ 9ರವರೆಗಿನ ಮೆಟ್ರೊ ಟ್ರಾವೆಲ್ ಕಾರ್ಡ್‌ನ ನಂಬರ್‌ಗಳನ್ನು ಹರಾಜು ಹಾಕಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿರ್ಧರಿಸಿದೆ. ಟ್ರಾವೆಲ್ ಕಾರ್ಡ್‌ಗೆ 11 ಅಂಕಿಗಳ ಸಂಖ್ಯೆ ಇರುತ್ತದೆ. ಅದರಲ್ಲಿ ಮೊದಲ ಆರು ಅಂಕಿ ಸಾಮಾನ್ಯವಾಗಿರುತ್ತದೆ. ಅದೆಂದರೆ 110014. ಇದರ ಜತೆಗೆ ಇತರ ಐದು ಅಂಕಿಗಳು ಬದಲಾಗುತ್ತವೆ.
ಕಾರ್ಡ್‌ನ ಮೊದಲ ಅಂಕಿ ಆರಂಭವಾಗುವುದು 00001ರಿಂದ. ಹೀಗೆ ಮೊದಲ ಒಂಬತ್ತು ಕಾರ್ಡ್‌ಗಳನ್ನು ಹರಾಜು ಹಾಕುವುದು. ಆ ನಂತರ 10ರಿಂದ 100ವರೆಗಿನ ಒಂದೊಂದು ಕಾರ್ಡ್ ನಂಬರ್‌ಗಳನ್ನೂ ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಲು ಮೆಟ್ರೊ ನಿರ್ಧರಿಸಿದೆ. ಇವುಗಳನ್ನು ಪ್ರೀಮಿಯಂ ಕಾರ್ಡ್ ಎಂದು ಕರೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.