ಬೆಂಗಳೂರು: ನಗರದ ವಿಕ್ರಂ ಆಸ್ಪತ್ರೆಯು ಮಾ. 13ರಂದು ವಿಶ್ವ ಕಿಡ್ನಿ ದಿನದ ಅಂಗವಾಗಿ ಉಚಿತ ತಪಾಸಣಾ ಶಿಬಿರ ಆಯೋಜಿಸಿದೆ. ಬಡವರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲೂ ನಿರ್ಧರಿಸಿದೆ.
ಪತ್ರಿಕಾ ಗೋಷ್ಠಿಯಲ್ಲಿ ಮಂಗಳವಾರ ವಿಕ್ರಂ ಆಸ್ಪತ್ರೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಧೀರ್ ಪೈ ಹಾಗೂ ಉಪ ವೈದ್ಯಕೀಯ ಅಧೀಕ್ಷಕ ಡಾ. ರವೀಶ್ ಈ ಮಾಹಿತಿ ನೀಡಿದರು. ‘ಮಕ್ಕಳಿಂದ ಮುದುಕರವರೆಗೆ ಎಲ್ಲ ವಯೋಮಾನದವರ ಮೂತ್ರರೋಗ ಹಾಗೂ ಮೂತ್ರಪಿಂಡ ಸಮಸ್ಯೆಗಳಿಗೆ ನಮ್ಮ ಆಸ್ಪತ್ರೆಯಲ್ಲಿ ಪರಿಹಾರ ಲಭ್ಯವಿದೆ’ ಎಂದು ಹೇಳಿದರು.
‘ದಿನದ ಅವಧಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಸೇವನೆ ಮಾಡಿದರೆ ಮೂತ್ರಪಿಂಡದಲ್ಲಿ ಹರಳುಗಳಾಗುವ (ಕಿಡ್ನಿ ಸ್ಟೋನ್) ಸಾಧ್ಯತೆ ತುಂಬಾ ಕಡಿಮೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.