ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿಯ (ಕೆಎಂಎಫ್) ನಿರ್ದೇಶಕ ಎಚ್.ಡಿ. ರೇವಣ್ಣ ಅವರು ಸಂಸ್ಥೆಯ ಕುರಿತು ಮಾಡಿರುವ ಆರೋಪಗಳು ಸತ್ಯಕ್ಕೆ ದೂರ. ಸಂಸ್ಥೆಯಲ್ಲಿ ಯಾವುದೇ ಸಂದರ್ಭದಲ್ಲೂ ನಾಲ್ಕು ಸಾವಿರ ಟನ್ ಹಾಲಿನ ಪುಡಿ ದಾಸ್ತಾನು ಇರಲಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ ಸ್ಪಷ್ಟೀಕರಣ ನೀಡಿದ್ದಾರೆ.
ಕೆಎಂಎಫ್‌ನಲ್ಲಿ ಪ್ರಸ್ತುತ 2,991 ಟನ್ ಹಾಲಿನ ಪುಡಿ ದಾಸ್ತಾನು ಇದೆ. ಇದರಲ್ಲಿ 850 ಟನ್ ಹಾಲಿನ ಪುಡಿಯನ್ನು ನೆರೆ ರಾಜ್ಯಗಳ ಹಾಲು ಮಹಾಮಂಡಳಿಗಳಿಗೆ ಮಾರಾಟ ಮಾಡುವ ಒಪ್ಪಂದ ಮಾಡಿಕೊಳ್ಳಲಾಗಿದೆ. 2,993 ಮೆಟ್ರಿಕ್ ಟನ್ ಬೆಣ್ಣೆ ದಾಸ್ತಾನು ಇದೆ.
ಇದರಲ್ಲಿ 1,500 ಮೆಟ್ರಿಕ್ ಟನ್ ಬೆಣ್ಣೆ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. `ಕೆಎಂಎಫ್ ಕಳೆದ 3 ವರ್ಷಗಳಿಂದ ಲಾಭ ಗಳಿಸುತ್ತಿದೆ. ನನ್ನ ಆಡಳಿತಾವಧಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ರೇವಣ್ಣ ಆರೋಪದ ಹಿಂದೆ ದುರುದ್ದೇಶ ಇದೆ~ ಎಂದು ರೆಡ್ಡಿ ಪ್ರತ್ಯಾರೋಪ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.