ADVERTISEMENT

ಗೀತಂ ವಿಶ್ವವಿದ್ಯಾಲಯಕ್ಕೆ ಮಾನ್ಯತೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 19:44 IST
Last Updated 29 ಮಾರ್ಚ್ 2018, 19:44 IST

ಬೆಂಗಳೂರು: ಗಾಂಧಿ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಆಂಡ್ ಮ್ಯಾನೇಜ್‌ವೆುಂಟ್‌ಗೆ (ಗೀತಂ) ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಸ್ವಾಯತ್ತತೆಯ ಮಾನ್ಯತೆ ನೀಡಿದೆ.

ಗೀತಂ ವಿಶ್ವವಿದ್ಯಾಲಯ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತು (ನ್ಯಾಕ್) ನೀಡುವ ‘ಎ ಪ್ಲಸ್ ಶ್ರೇಣಿ’ ಪಡೆದಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ವರ್ಗವಾರು ಸ್ವಾಯತ್ತೆಯ ಮಾನ್ಯತೆ ಪ್ರಕಟಿಸಿದ್ದು, ಇದರಲ್ಲಿ ಗೀತಂಗೂ ಸ್ಥಾನ ಸಿಕ್ಕಿದೆ ಎಂದು ಕುಲಪತಿ ಪಿ.ವಿ. ಶಿವಪುಲ್ಲಯ್ಯ ತಿಳಿಸಿದ್ದಾರೆ.

‘ವರ್ಗವಾರು ಸ್ವಾಯತ್ತೆಯಿಂದ ವಿಶ್ವವಿದ್ಯಾಲಯಕ್ಕೆ ಕೊಂಚ ಸ್ವಾತಂತ್ರ್ಯ ಸಿಕ್ಕಿದೆ. ಹೊಸ ಪಠ್ಯಕ್ರಮ ಹಾಗೂ ಸದ್ಯ ಇಲ್ಲದಿರುವ ಕೋರ್ಸ್‌ಗಳನ್ನು ಪ್ರಾರಂಭಿಸಲು ಅನುಕೂಲವಾಗಲಿದೆ. ಎಲ್ಲದಕ್ಕೂ ಯುಜಿಸಿ ಅನುಮತಿ ಪಡೆಯುವುದು ತಪ್ಪಿದೆ’ ಎಂದಿದ್ದಾರೆ.

ADVERTISEMENT

ಬೆಂಗಳೂರು, ವಿಶಾಖಪಟ್ಟಣ ಹಾಗೂ ಹೈದರಾಬಾದ್‌ನಲ್ಲಿ ಗೀತಂ ವಿಶ್ವವಿದ್ಯಾಲಯ ಇದೆ. 15 ಸಂಸ್ಥೆಗಳು, 52 ವಿಭಾಗಗಳು, 10 ಸಂಶೋಧನಾ ಕೇಂದ್ರಗಳನ್ನು ಇದು ಒಳಗೊಂಡಿದೆ. ಒಟ್ಟು 144 ಕೋರ್ಸ್‌ಗಳು ಇಲ್ಲಿವೆ. 20 ಸಾವಿರ ವಿದ್ಯಾರ್ಥಿಗಳು, 1,200 ಸಂಶೋಧನಾ ವಿದ್ಯಾರ್ಥಿಗಳು, 60 ಸಾವಿರ ದೂರಶಿಕ್ಷಣ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.