ADVERTISEMENT

ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 20:00 IST
Last Updated 20 ಡಿಸೆಂಬರ್ 2013, 20:00 IST

ದೇವನಹಳ್ಳಿ: ‘ಪ್ರತಿಯೊಂದು ಮಕ್ಕಳ ಲ್ಲಿ ವಿಶೇಷ ಸಾಮರ್ಥ್ಯ ವಿರುತ್ತದೆ. ಅದನ್ನು ತಮ್ಮ  ಸಾಧನೆಗೆ ಬಳಸಿ ಕೊಳ್ಳಬೇಕು’ ಎಂದು ಶಾಸಕ ಪಿಳ್ಳ ಮುನಿಶಾಮಪ್ಪ ತಿಳಿಸಿದರು.

ದೇವನಹಳ್ಳಿ ಸರ್ಕಾರಿ ಹೆಣ್ಣು ಮಕ್ಕಳ ಸರ್ಕಾರಿ ಪ್ರೌಢಶಾಲಾ ಆವ ರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಿದ್ದ 8 ನೇ ತರಗತಿ ವಿದ್ಯಾರ್ಥಿನಿಯರಿಗೆ ಸೈಕಲ್‌ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಎಲ್ಲಾ ರೀತಿಯಿಂದ ಉತ್ತಮವಾಗಿವೆ.  ಶಾಲೆಯಲ್ಲಿ ಶಿಕ್ಷ ಕರು ಯಾವ ರೀತಿ ಇರುತ್ತಾ ರೆಯೋ ಅದನ್ನು ಮಕ್ಕಳು ಅನುಸರಿ ಸುತ್ತಾರೆ. ಶೈಕ್ಷಣಿಕ ಗುಣಮಟ್ಟಕ್ಕೆ ಪೂರಕವಾದ ವಾತಾವರಣ ಶಾಲಾ ವ್ಯಾಪ್ತಿಯಲ್ಲಿ ರಬೇಕು. ವ್ಯಾಸಂಗದ ಜೊತೆಗೆ ಭವಿ ಷ್ಯದ ಶಿಕ್ಷಣದ ಬಗ್ಗೆ ಮಕ್ಕಳಿಗೆ ಅರಿವು ಬೆಳೆಸಬೇಕು’ ಎಂದರು. ‘ಪ್ರಜ್ಞಾ ವಂತರಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಸೈಕಲನ್ನು ಮನೆಕೆಲಸಕ್ಕೆ ಬಳಸಬಾರದು’ ಎಂದರು.

ಮುಖ್ಯ ಶಿಕ್ಷಕಿ ಸುಧಾತಾಯಿ, ಪುರ ಸಭೆ ಸದಸ್ಯ ರವೀಂದ್ರ, ಶಶಿ ಕುಮಾರ್‌, ಗೋಪಾಲ್‌, ಶಾಂತಮ್ಮ, ಪುಷ್ಪ ರವಿ ಕುಮಾರ್‌, ಎಂ.ಕುಮಾರ್‌, ಗೋಪಾ ಲಕೃಷ್ಣ, ಜೆ.ಡಿ.ಎಸ್‌ ತಾಲ್ಲೂಕು ಅಧ್ಯಕ್ಷ ಮುನಿ ಶ್ಯಾಮೇಗೌಡ, ಶಿಕ್ಷಕ ಅಶ್ವತ್ಥ್‌ ರಾವ್‌, ಎಚ್‌.ಆರ್‌.ಸ್ವಾಮಿ, ಶಿವಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.