ADVERTISEMENT

ಗೂಡ್‌ಶೆಡ್‌ ರಸ್ತೆ ವಿಸ್ತರಣೆ: ಮೇಯರ್‌

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 19:59 IST
Last Updated 13 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಅಧಿಕಾರ ವಹಿಸಿಕೊಂಡ ಮೇಲೆ ಮೇಯರ್ ಬಿ.ಎಸ್.ಸತ್ಯನಾರಾಯಣ ಅವರು ಬಿಬಿ ಎಂಪಿ ಆಡಳಿತಾಧಿಕಾರಿಗಳಿಗೆ ಚುರುಕು ಮುಟ್ಟಿಸಲು ಮುಂದಾಗಿದ್ದಾರೆ.

ಕಳೆದ 3 ದಿನಗಳಿಂದ ಬಿಬಿಎಂಪಿಯ ವಿವಿಧ ಇಲಾ ಖೆಗಳ ಅಧಿಕಾರಿಗಳೊಂದಿಗೆ  ಸರಣಿ ಸಭೆ ನಡೆ ಸಿದ್ದ ಅವರು  ಕೈಗೊಂಡಿರುವ ನೂತನ ಯೋಜನೆಗಳ ಬಗ್ಗೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ  ನೀಡಿದರು.

‘ಸಂಚಾರ ದಟ್ಟ ಣೆಯ ಸಮಸ್ಯೆಯನ್ನು ಬಗೆಹರಿ ಸಲು ಗೂಡ್ ಶೆಡ್ ರಸ್ತೆಯ ವಿಸ್ತರಣೆ ಹಾಗೂ ಜಂಕ್ಷನ್ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ. ಅಲ್ಲದೇ ಆರ್.ಟಿ.ನಗರದಿಂದ ಸಂಜಯನಗರ ವರೆಗಿನ ರಸ್ತೆ, ಚಾಮರಾಜಪೇಟೆ 5ನೇ  ಮುಖ್ಯರಸ್ತೆ ವಿಸ್ತರಣೆಗೆ ಈಗಾಗಲೇ ರೂಪುರೇಷೆ ಸಿದ್ಧ ಗೊಂಡಿದ್ದು, ಟಿಡಿಆರ್ ಮೂಲಕ ಜಾಗ ನೀಡಲು ಸಾರ್ವಜನಿಕರು ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಅವರು ತಿಳಿಸಿದರು.

‘ನಗರದಾದ್ಯಂತ ಬಸ್ ನಿಲ್ದಾಣ, ಅಂಗಡಿ– ಮುಂಗಟ್ಟುಗಳಲ್ಲಿ ತೂಗು ಹಾಕಿರುವ ಜಾಹೀರಾತು ಫಲಕಗಳ ಬಗ್ಗೆ ತಿಂಗಳ ಅಂತ್ಯದೊಳಗೆ  ಸಂಪೂರ್ಣ ಮಾಹಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅಂಗಡಿಗಳಲ್ಲಿ ಕಾಣಿಸಿ ಕೊಳ್ಳುವ  ಜಾಹೀರಾತು ಫಲಕಗಳಿಗೆ ಶುಲ್ಕ ವಿಧಿಸುವಂತೆ ನಿರ್ದೇಶನ  ನೀಡಲಾಗಿದೆ’ ಎಂದರು.

  ‘ಜಾಹೀರಾತುಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ದೊರೆಯುತ್ತಿಲ್ಲ. ಅಲ್ಲದೇ ಕಂದಾಯ ಅಧಿಕಾರಿಗಳು ಮನೆ ಮನೆಗೆ ತೆರಳಿಯಾದಾರೂ ಆಸ್ತಿ ತೆರಿಗೆಯನ್ನು ಸಂಗ್ರಹಿಸುವಂತೆ ತಾಕೀತು ಮಾಡ ಲಾಗಿದೆ’ ಎಂದರು.

ತ್ಯಾಜ್ಯ ನಿರ್ವಹಣೆಯ ಉಸ್ತುವಾರಿಯನ್ನು ಹಿರಿಯ ಆರೋಗ್ಯಾಧಿಕಾರಿಗಳಿಗೆ ವಹಿಸಲು ನಿರ್ಧರಿಸಲಾಗಿದೆ. ಇದಲ್ಲದೇ  ಕೆ.ಆರ್.ಮಾರು ಕಟ್ಟೆಯಲ್ಲಿ ಪ್ರತಿ ಸೋಮವಾರ ಶಾಲೆ ಮತ್ತು ಕಾಲೇಜು  ವಿದ್ಯಾರ್ಥಿಗಳ ಸಹಕಾರದೊಂದಿಗೆ ಸ್ವಚ್ಛತಾ ಆಂದೋಲನ ನಡೆಯಲಿದೆ’ ಎಂದರು.

ಅಸಹಾಯಕತೆ!
ನಗರದಾದ್ಯಂತ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯದ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ ಮೇಯರ್ ಮಳೆಯಿಂದಾಗಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಇದಕ್ಕೆ ದನಿಗೂಡಿಸಿದ ಪಾಲಿಕೆ ಆಯುಕ್ತ  ಎಂ.ಲಕ್ಷ್ಮಿನಾರಾಯಣ, ‘ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ  ಹಾಗೂ ಅಗತ್ಯವಿದ್ದಲ್ಲಿ ಹೊಸ ರಸ್ತೆಗಳ ನಿರ್ಮಾಣ  ಕಾರ್ಯವನ್ನು ಇನ್ನೂ ಮೂರು ತಿಂಗಳಿನಲ್ಲಿ ಪೂರ್ಣಗೊಳಿಸ ಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT