ಬೆಂಗಳೂರು: ‘ಗೌರವ ಡಾಕ್ಟರೇಟ್ ಪಡೆಯುವ ಅರ್ಹತೆಯುಳ್ಳವರು ಅಪೇಕ್ಷೆ ಮಾಡದೆ ಸುಮ್ಮನೇ ನೇಪಥ್ಯ ದಲ್ಲಿ ಉಳಿದರೆ, ಅಪಾತ್ರರಾದ ವರು ಮಾತ್ರ ಆ ಪದವಿಯನ್ನು ತಮ್ಮದಾಗಿಸಿ ಕೊಳ್ಳಲು ವಶೀಲಿ ಮಾಡುತ್ತಾರೆ’ ಎಂದು ಹಿರಿಯ ವಿಮರ್ಶಕ ಡಾ.ಸಿ. ಎನ್. ರಾಮಚಂದ್ರನ್ ಕುಟುಕಿದರು.
‘ನಮ್ಮ ಬಳಗ’ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಡಾ. ಕೆ.ಸತ್ಯನಾರಾಯಣ ಅವರ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ‘ವಶೀಲಿಯಿಂದ ಪದವಿ ಪಡೆದಾಗ ಅದರಲ್ಲಿನ ಗೌರವ ಕಾಣೆಯಾಗಿ ಕೇವಲ ಡಾಕ್ಟರೇಟ್ ಮಾತ್ರ ಉಳಿಯುತ್ತದೆ’ ಎಂದೂ ಚುಚ್ಚಿದರು.
‘ಸಾಹಿತ್ಯ ಮತ್ತು ಆಡಳಿತ ಎರಡೂ ಕ್ಷೇತ್ರಗಳಲ್ಲಿ ದೊಡ್ಡ ಸಾಧನೆ ಮಾಡಿದ ಸತ್ಯನಾರಾಯಣ ಅವರಿಗೆ ಗೌರವ ಡಾಕ್ಟರೇಟ್ ನೀಡುವ ಮೂಲಕ ಬೆಂಗಳೂರು ವಿಶ್ವವಿದ್ಯಾಲಯ ಉತ್ತಮ ಕೆಲಸ ಮಾಡಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ‘ಬರವಣಿಗೆಯಲ್ಲಿ ಎರಡು ವಿಧ. ಒಂದು ಪಾಂಡಿತ್ಯಪೂರ್ಣವಾದರೆ, ಮತ್ತೊಂದು ಮುಕ್ತ ಚಿಂತನೆ. ಸತ್ಯ ನಾರಾಯಣ ಗಂಭೀರ ಚಿಂತಕರಾ ದರೂ ಆಯ್ದುಕೊಂಡಿದ್ದು 2ನೇ ಮಾರ್ಗವನ್ನು. ಆಧಾರಗಳನ್ನೇ ಹೆಚ್ಚಾಗಿ ಉಲ್ಲೇಖ ಮಾಡಬೇಕಾದ್ದ ರಿಂದ ಮೊದಲ ಮಾರ್ಗದಲ್ಲಿ ಬರ ವಣಿಗೆ ಶುಷ್ಕವಾಗುವ ಸಾಧ್ಯತೆ ಇದ್ದು, ಹೊಸ ಹೊಳಹು ಒಳನೋಟ ಬೀರುವ ಮುಕ್ತ ಚಿಂತನೆಗೆ ಅವರು ಅಂಟಿಕೊಂ ಡಿದ್ದಾರೆ’ ಎಂದು ವಿಶ್ಲೇಷಿಸಿದರು.
‘ಓದುಗ ಇಲ್ಲದಿದ್ದರೆ ಸಾಹಿತಿಯೇ ಇಲ್ಲ. ಶತಮಾನಗಳ ಹಿಂದೆ ಜೀವ ಕಳೆದು ಕೊಂಡ ಕೃತಿಗೂ ಓದುಗ ಪುನರ್ಜನ್ಮ ನೀಡಬಲ್ಲ. ಸತ್ಯನಾರಾ ಯಣ ಅವರ ಕೃತಿಗಳಲ್ಲಿ ಇಂತಹ ಹೊಳಹುಗಳು ಬೇಕಾದಷ್ಟಿವೆ. ಅವರ ಓದಿನ ಹರವೂ ದೊಡ್ಡದಾಗಿದೆ’ ಎಂದು ಹೇಳಿದರು.
ವಿಮರ್ಶಕಿ ಡಾ. ಆಶಾದೇವಿ, ‘ಸತ್ಯನಾರಾಯಣ ಅವರ ಕಥೆಗಳು ನಿರೂಪಣಾ ಮಾದರಿ ತಂತ್ರವನ್ನು ಹೊಂದಿದ್ದು, ವಿಶ್ಲೇಷಣಾ ಪ್ರಧಾನ ಪಾತ್ರಗಳನ್ನು ಹೆಚ್ಚಾಗಿ ಸೃಷ್ಟಿಸಿದ್ದಾರೆ. ಸಾವಿನ ಮಹತ್ವವನ್ನು ಸಾರುವ ಮೂಲಕ ಬದುಕನ್ನು ಕಟ್ಟಿಕೊಡುವ ಯತ್ನ ಅವರ ಕಥೆಗಳಲ್ಲಿದೆ’ ಎಂದು ತಿಳಿಸಿದರು.
ಅಭಿನಂದನಾ ನುಡಿಗಳನ್ನು ಆಡಿದ ಮತ್ತೊಬ್ಬ ವಿಮರ್ಶಕ ಪ್ರೊ.ಎಚ್. ಎಸ್. ರಾಘವೇಂದ್ರ ರಾವ್, ‘ಪ್ರತಿಕ್ಷ ಣವೂ ಕಥೆಗಳನ್ನು ಬೇಟೆಯಾಡುವ ಸತ್ಯನಾರಾಯಣ, ಸದಾ ಗೆಳೆತನದ ಹುಡುಕಾಟದಲ್ಲಿರುವ ವ್ಯಕ್ತಿ. ಅವರ ಒಳಗಿನ ಆ ಉರಿಯುವಿಕೆಯೇ ಬರಹ ವಾಗಿದೆ’ ಎಂದು ಕೊಂಡಾಡಿದರು.
‘ಅವರ ಕಥೆಗಳಲ್ಲಿ ಸಮಾಜದ ಅಂಚಿನಲ್ಲಿ ಇರುವವರನ್ನೇ ಹೆಚ್ಚಾಗಿ ಕಾಣುತ್ತೇವೆ. ಬಡವರ ಮೇಲೆ ಅವರಿಗೆ ಬಲು ಪ್ರೀತಿ. ಪಾತ್ರಗಳ ಆತ್ಮ ಗೌರವವನ್ನು ಅವರು ಸದಾ ಕಾಪಾಡು ತ್ತಾರೆ’ ಎಂದು ವಿಶ್ಲೇಷಿಸಿದರು. ಅಧ್ಯಕ್ಷತೆ ವಹಿಸಿದ್ದ ಡಾ. ಸಿದ್ಧ ಲಿಂಗಯ್ಯ, ‘ಸತ್ಯನಾರಾಯಣ ಅವರ ಕತೆಗಳಲ್ಲಿ ದಲಿತಪರ ಮತ್ತು ಸಮಾಜ ವಾದಿ ಚಿಂತನೆ ಎದ್ದು ಕಾಣುತ್ತದೆ. ಲೋಹಿಯಾ ವಿಚಾರಧಾರೆ ಸಹ ಅದ ರಲ್ಲಿ ಇಣುಕಿದೆ. ಕೆಳಸ್ತರದ ಪಾತ್ರ ಗಳನ್ನು ಅವರು ಸೃಷ್ಟಿಸಿದ ರೀತಿ ಬೆರಗು ಹುಟ್ಟಿಸುತ್ತದೆ’ ಎಂದು ಹೇಳಿದರು.
ಅಭಿನಂದನೆಗೆ ಪ್ರತಿಕ್ರಿಯಿಸಿದ ಸತ್ಯ ನಾರಾಯಣ, ‘ಬರವಣಿಗೆಯು ಹೊಸ ಸ್ನೇಹಿತರು ಮತ್ತು ಸಂಬಂಧಗಳನ್ನು ದೊರಕಿಸಿಕೊಡುತ್ತದೆ. ಸಮುದಾಯ ಪ್ರಜ್ಞೆ, ಕಥೆ ಕೇಳಿಸಿಕೊಳ್ಳುವ ಗುಣ ಬೆಳೆಸಿಕೊಂಡರೆ ಗಟ್ಟಿಯಾದ ಕಥೆ ಹೇಳಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು. ‘ನಮ್ಮ ಬಳಗ’ದ ಲಕ್ಷ್ಮಿನಾರಾಯಣ ನಾಗವಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಿಡುಗಡೆಯಾದ ಕೃತಿಗಳು
ಸುಮ್ಮನೇ ಓದೋಣ, ಪುಟಗಳು: 198, ಬೆಲೆ: ₨ 95
ಮುಂದಣ ಅನಂತ, ಪುಟಗಳು: 178, ಬೆಲೆ: ₨ 130
ಎರಡೂ ಕೃತಿಗಳ ಲೇಖಕ: ಡಾ. ಕೆ.ಸತ್ಯನಾರಾಯಣ
ಪ್ರಕಾಶಕರು: ಐಬಿಎಚ್ ಪ್ರಕಾಶನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.