ADVERTISEMENT

ಗ್ರಾಮದ ಮನೆಗಳ ಪಟ್ಟಿ ನೀಡಲು ಆದೇಶ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 19:05 IST
Last Updated 19 ಫೆಬ್ರುವರಿ 2011, 19:05 IST

ಬೆಂಗಳೂರು: ಶಿಡ್ಲಘಟ್ಟ ತಾಲ್ಲೂಕು ಬೆಳ್ಳೂಟಿ ಗ್ರಾಮದ ಮನೆಗಳ ಪಟ್ಟಿಯನ್ನು ಅರ್ಜಿದಾರರಿಗೆ ಕೂಡಲೇ ನೀಡುವಂತೆ ರಾಜ್ಯ ಮಾಹಿತಿ ಆಯೋಗವು ಆನೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಂ.ಸೋಮಶೇಖರಯ್ಯ ಅವರಿಗೆ ಆದೇಶಿಸಿದೆ.

ಎಂ.ಅಮರನಾರಾಯಣಸ್ವಾಮಿ ಎಂಬುವರು 2008ರ ನವೆಂಬರ್ 7ರಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಿ 1976-2000 ವರೆಗಿನ ಮನೆಗಳ ಪಟ್ಟಿಯನ್ನು ದಾಖಲೆ ಸಮೇತ ನೀಡುವಂತೆ ಕೇಳಿದ್ದರು. ಆದರೆ ಕಾರ್ಯದರ್ಶಿ ಸೂಕ್ತ ಮಾಹಿತಿಯನ್ನು ನೀಡದ ಕಾರಣ ಅರ್ಜಿದಾರರು ಕಳೆದ ಮೇ 14ರಂದು ಆಯೋಗದ ಮೊರೆ ಹೋಗಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಮಾಹಿತಿ ಆಯೋಗದ ಆಯುಕ್ತ ಡಾ.ಎಚ್.ಎನ್.ಕೃಷ್ಣ ಅವರು ಅರ್ಜಿದಾರರಿಗೆ 30 ದಿನಗಳಲ್ಲಿ ಮಾಹಿತಿ ನೀಡುವಂತೆ ಕಳೆದ ನವೆಂಬರ್ 9ರಂದು ಆದೇಶಿಸಿದ್ದರು. ಇಷ್ಟಾದರೂ ಮಾಹಿತಿ ನೀಡದ ಕಾರಣ ಅರ್ಜಿದಾರರು ಆಕ್ಷೇಪಣೆ ವ್ಯಕ್ತಪಡಿಸಿ ಈ ವರ್ಷದ ಜ. 12ರಂದು ಮತ್ತೆ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಇದನ್ನು ಸ್ಪೀಕರಿಸಿದ ಆಯೋಗವು ಅರ್ಜಿದಾರರಿಗೆ ದಾಖಲಾತಿಗಳನ್ನು ಒದಗಿಸಿ, ಆಯೋಗ ನೀಡಿದ ಆದೇಶವನ್ನು ಪಾಲಿಸಿದ ಬಗ್ಗೆ ಕೂಡಲೇ ವರದಿ ನೀಡುವಂತೆ ಜ.21ರಂದು ಮಾಹಿತಿ ಆಯೋಗದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.