ADVERTISEMENT

`ತಿರುಮಲ' ಲಾಂಛನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 19:59 IST
Last Updated 22 ಏಪ್ರಿಲ್ 2013, 19:59 IST

ಬೆಂಗಳೂರು:  ತಿರುಮಲ ಮಿಲ್ಕ್ ಪ್ರಾಡಕ್ಟ್‌ನ ನೂತನ ಲಾಂಛನ ಬಿಡುಗಡೆ ಹಾಗೂ ಹಾಲಿನ ಉತ್ಪನ್ನಗಳ ಬಿಡುಗಡೆ ನಗರದಲ್ಲಿ ಸೋಮವಾರ ಜರುಗಿತು. ನಟಿ ಶುಭಾ ಪೂಂಜಾ ಲಾಂಛನ ಬಿಡುಗಡೆ ಮಾಡಿದರು.

ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಬ್ರಹ್ಮ ನಾಯ್ಡು, `ಆಂಧ್ರ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ತಿರುಮಲ ಹಾಲಿನ ಉತ್ಪನ್ನ ಮಾರಾಟ ಮಾಡಲಾಗುತ್ತಿದೆ. ನಿತ್ಯ 1.1 ದಶಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಮಾವು, ಸ್ಟ್ರಾಬೆರಿ, ಬಾಳೆರುಚಿಗಳಲ್ಲಿ ಟೆಟ್ರಾ ಫಿನೋ ತಯಾರಿಸಿದ ಪಶು ಮತ್ತು ಎಮ್ಮೆ ಹಾಲಿನ ಟ್ರಿಂಗೋ ಬಿಡುಗಡೆ ಮಾಡಲಾಗಿದೆ. ಸಂಸ್ಥೆಯ ಹಾಲು ಎಲ್ಲರಿಗೂ ಕೈಗೆಟಕುವ ದರದಲ್ಲಿ ಇದೆ' ಎಂದರು.

ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಬ್ರಹ್ಮಾನಂದ, ನಿರ್ದೇಶಕರಾದ ನಾಗೇಶ್ವರ ರಾವ್, ಸತ್ಯನಾರಾಯಣ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.