ADVERTISEMENT

ತ್ಯಾಜ್ಯ ಸಂಗ್ರಹಕ್ಕೆ ಕಾಂಪ್ಯಾಕ್ಟ್ ಲಾರಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 20:15 IST
Last Updated 23 ಫೆಬ್ರುವರಿ 2011, 20:15 IST

ಬೆಂಗಳೂರು: ತ್ಯಾಜ್ಯ ಸಂಗ್ರಹಿಸಲು ಬಳಸಲಾಗುವ ಹೊಸ ನಾಲ್ಕು ಕಾಂಪ್ಯಾಕ್ಟ್ ಲಾರಿಗಳ ಸೇವೆಗೆ ನಗರಾಭಿವೃದ್ಧಿ ಸಚಿವ ಎಸ್.ಸುರೇಶ್‌ಕುಮಾರ್‌ಬುಧವಾರ ರಾಜಾಜಿನಗರದಲ್ಲಿಚಾಲನೆ ನೀಡಿದರು.

ರಾಜಾಜಿನಗರ, ಪ್ರಕಾಶ್ ನಗರ ಹಾಗೂ ಶ್ರೀರಾಮ ಮಂದಿರ ವಾರ್ಡ್‌ಗಳಲ್ಲಿನ ತ್ಯಾಜ್ಯವನ್ನು ಸಂಗ್ರಹಿಸಲು ಈ ಲಾರಿಗಳನ್ನು ಬಳಸಲಾಗುವುದು. ಇವು ಸ್ವಚ್ಛತೆ ಕಾಪಾಡಲು ಸಹಕಾರಿಯಾಗಲಿವೆ. ಮುಂದಿನ ದಿನಗಳಲ್ಲಿ ಈ ಮಾದರಿಯ ಲಾರಿಗಳನ್ನು ಇತರ ವಾರ್ಡಗಳಿಗೂ ವಿಸ್ತರಿಸುವ ಯೋಚನೆ ಇದೆ ಎಂದು  ಅಧಿಕಾರಿಗಳು ತಿಳಿಸಿದರು.

ಕಾಂಪ್ಯಾಕ್ಟ್ ಲಾರಿಯ ವಿಶೇಷತೆ: ಸಾಮಾನ್ಯವಾದ ಲಾರಿಗಳಲ್ಲಿ 4 ಟನ್ ಕಸ ಸಾಗಿಸಬಹುದಾದರೆ, ಈ ಲಾರಿಗಳಲ್ಲಿ 12 ಟನ್‌ಗಳಷ್ಟು ತ್ಯಾಜ್ಯವನ್ನು ಸಾಗಿಸಬಹುದು. ಮಾರ್ಗ ಮಧ್ಯೆ ಕಸ ಹೊರಗೆ ಬೀಳುವುದಿಲ್ಲ, ದೂರ್ವಾಸನೆ ಹೊರಹೊಮ್ಮುವುದಿಲ್ಲ. ಪ್ರತಿ ಲಾರಿ ಬೆಲೆ ರೂ 25 ಲಕ್ಷ.

ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ರವೀಂದ್ರನ್, ಕೃಷ್ಣಪ್ಪ, ಜಯರತ್ನ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.