ADVERTISEMENT

ನಗರಕ್ಕೆ ನಾಳೆ ಸಿರಿಯನ್ ಚರ್ಚ್ ಮುಖ್ಯಸ್ಥರ ಭೇಟಿ.

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 20:20 IST
Last Updated 24 ಮಾರ್ಚ್ 2011, 20:20 IST

ಬೆಂಗಳೂರು: ‘ಇದೇ 26ರಂದು ಮಲಂಕರ ಅರ್ಥೊಡಕ್ಸ್ ಸಿರಿಯನ್ ಚರ್ಚ್‌ನ ಮುಖ್ಯಸ್ಥ ಎರಡನೇ ಮೋರನ್ ಮಾರ್ ಬೆಸೆಲಿಯೋಸ್ ಮಾರ್ಥೋಮಾ ಪೌಲೋಸ್ ಅವರು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ.  ಇದೇ ಸಂದರ್ಭದಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಬೆಂಗಳೂರು ಡಯೋಸಿಸ್‌ನ ಬಿಷಪ್ ಡಾ.ಅಬ್ರಹಾಂ ಮಾರ್ ಸೆರಾಫಿಮ್ ತಿಳಿಸಿದರು.
 

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದ ಹೆಣ್ಣೂರು ರಸ್ತೆಯ, ಲಿಂಗರಾಜಪುರದ ಕ್ಯಾಂಪಸ್ ಕ್ರುಸೇಡ್‌ನ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಆರ್.ಅಶೋಕ ಸೇರಿದಂತೆ ವಿವಿಧ ಶಾಸಕರು ಮತ್ತು ಆರ್ಚ್‌ಬಿಷಪ್ ಡಾ.ಬರ್ನಾರ್ಡ್ ಮೋರಾಸ್ ಭಾಗವಹಿಸುವರು.
 

ಮಾ.27ರಂದು ಬೆಳಿಗ್ಗೆ ತಮ್ಮನ್ನು ಬೆಂಗಳೂರು ವಿಭಾಗಕ್ಕೆ ಬಿಷಪ್ ಆಗಿ ನೇಮಕ ಮಾಡಿರುವ ಕುರಿತು ಘೋಷಣೆ ಮಾಡಲಿದ್ದು, ಅಧಿಕಾರ ಸ್ವೀಕಾರವೂ ನಡೆಯಲಿದೆ. ವಿವಿಧೆಡೆಗಳಿಂದ ಈ ಕಾರ್ಯಕ್ರಮಕ್ಕೆ 3000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಅವರು  ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.