ADVERTISEMENT

ನಗರದಲ್ಲಿ ಇಂದು , ಮೇ 20, ಭಾನುವಾರ

​ಪ್ರಜಾವಾಣಿ ವಾರ್ತೆ
Published 19 ಮೇ 2012, 19:30 IST
Last Updated 19 ಮೇ 2012, 19:30 IST

ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘ : ಕುಚಲಾಂಬ ಕಲ್ಯಾಣ ಮಂಟಪ, ಎರಡನೇ ಹಂತ, ಜಯನಗರ. ರಾಜ್ಯ ಸಮ್ಮೇಳನ ಹಾಗೂ 10ನೇ ವಾರ್ಷಿಕೋತ್ಸವ. ಅತಿಥಿಗಳು - ಮುಖ್ಯ ಮಂತ್ರಿ ಡಿ.ವಿ.ಸದಾನಂದಗೌಡ, ರೈಲ್ವೆ ಸಚಿವ ಕೆ.ಎಚ್.ಮುನಿಯಪ್ಪ. ಆಶೀರ್ವಚನ - ಕೇರಳದ ಪಂದಳಂ ಅರಮನೆ ಸಮಿತಿ ಅಧ್ಯಕ್ಷ ವಿಶಾಖಂ ತಿರುನಾಳ್ ರಾಮವರ್ಮ. ಬೆಳಿಗ್ಗೆ 9.15.

ಅಂಕಿತ ಪುಸ್ತಕ: ರವೀಂದ್ರ ಕಲಾಕ್ಷೇತ್ರ, ಜೆ. ಸಿ. ರಸ್ತೆ. ಹಿರಿಯ ಐಎಎಸ್ ಅಧಿಕಾರಿ ಕೆ. ಜೈರಾಜ್ ಅವರ `ಜೈತ್ರಯಾತ್ರೆ; ಆಡಳಿತದ ನೆನಪುಗಳು~ ಪುಸ್ತಕದ ಬಿಡುಗಡೆ ಸಮಾರಂಭ. ಉದ್ಘಾಟನೆ - ಮುಖ್ಯಮಂತ್ರಿ ಡಿ. ವಿ. ಸದಾನಂದಗೌಡ. ಅತಿಥಿಗಳು: ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ಸಾಹಿತಿ ಗಿರೀಶ್ ಕಾರ್ನಾಡ್, ಪತ್ರಕರ್ತ ವಿಶ್ವೇಶ್ವರ ಭಟ್. ಅಧ್ಯಕ್ಷತೆ- ಡಿ.ವೀರೇಂದ್ರ ಹೆಗ್ಗಡೆ. ಬೆಳಿಗ್ಗೆ 10.30.

ಕರ್ನಾಟಕ ಕುಲಾಂತರಿ ವಿರೊಧಿ ಆಂದೋಲನ : ಎನ್.ಜಿ.ಒ ಸಭಾಂಗಣ, ರಾಜ್ಯ ಬೀಜ ರಕ್ಷಕರ ಮೊದಲ ರಾಜ್ಯಮಟ್ಟದ ಸಮಾವೇಶ. ಉದ್ಘಾಟನೆ - ಮುಖ್ಯಮಂತ್ರಿ ಡಿ. ವಿ. ಸದಾನಂದಗೌಡ. ಅತಿಥಿಗಳು - ಸಾವಯವ ಕೃಷಿಕರಾದ ಡಾ.ಎಲ್. ನಾರಾಯಣ ರೆಡ್ಡಿ, ಡಿ.ಡಿ.ಭರಮಗೌಡ್ರ. ಅಧ್ಯಕ್ಷತೆ - ಪರಿಸರವಾದಿ ಡಾ.ಅ.ನ.ಯಲ್ಲಪ್ಪ ರೆಡ್ಡಿ. ಬೆಳಿಗ್ಗೆ 11.

ಭಾರತರತ್ನ ರಾಜೀವ್ ಗಾಂಧಿ ಜ್ಯೋತಿ ಸಮಿತಿ : ರಾಜೀವ್ ಗಾಂಧಿ ಪ್ರತಿಮೆಯ ಎದುರು, ರಾಜೀವ್ ಗಾಂಧಿ ವೃತ್ತ, ಶೇಷಾದ್ರಿಪುರ. ರಾಜೀವ್ ಗಾಂಧಿ ಅವರ 21ನೇ ಪುಣ್ಯತಿಥಿಯ ಅಂಗವಾಗಿ ಬೆಂಗಳೂರಿನಿಂದ ಪೆರಂಬತ್ತೂರಿಗೆ ಜ್ಯೋತಿ ಯಾತ್ರೆ. ಉದ್ಘಾಟನೆ - ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಅತಿಥಿಗಳು - ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕರಾದ ರಾಮಲಿಂಗಾ ರೆಡ್ಡಿ, ಎಂ.ಕೃಷ್ಣಪ್ಪ, ಪ್ರಸನ್ನಕುಮಾರ್, ನೆ.ಲ.ನರೇಂದ್ರಬಾಬು. ಬೆಳಿಗ್ಗೆ 11.

ಆಕೃತಿ ಪುಸ್ತಕ :12ನೇ ಮುಖ್ಯರಸ್ತೆ, 3ನೇ ಹಂತ, ರಾಜಾಜಿನಗರ, ಕಥೆಗಾರ ಕುಂ.ವೀರಭದ್ರಪ್ಪ ಅವರೊಂದಿಗೆ ಸಂವಾದ ಕಾರ್ಯಕ್ರಮ. ನಂತರ ಸೃಜನ್ ನಿರ್ದೇಶನದ `ಕುಂವೀ~ ಸಾಕ್ಷ್ಯಚಿತ್ರ ಪ್ರದರ್ಶನ. ಬೆಳಿಗ್ಗೆ 10.30.

ಕನ್ನಡ ಜನ ಶಕ್ತಿ: ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಕೆಂಗಲ್ ಹನುಮಂತಯ್ಯನವರ ವ್ಯಕ್ತಿತ್ವ, ವಿಚಾರ ಹಾಗೂ ಆಡಳಿತದ ನೆನಪು. ಅತಿಥಿಗಳು - ವಿಧಾನ ಪರಿಷತ್ ಸದಸ್ಯರಾದ ಡಾ.ಎಂ.ಆರ್.ದೊರೆಸ್ವಾಮಿ, ವಿ.ಆರ್.ಸುದರ್ಶನ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ, ಪಿ.ಜಿ.ಆರ್.ಸಿಂಧ್ಯ. ಬೆಳಿಗ್ಗೆ 11.

ಡಾ.ಬಿ.ಆರ್.ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘ : ನಂ.204, ಏಳನೇ ಮುಖ್ಯರಸ್ತೆ, ರಾಜೇಂದ್ರ ನಗರ, ಕೋರಮಂಗಲ. ಅಂಬೇಡ್ಕರ್ ಪ್ರತಿಮೆ ಅನಾವರಣ. ಅತಿಥಿಗಳು - ಶಾಸಕ ರಾಮಲಿಂಗಾ ರೆಡ್ಡಿ, ಬಿಬಿಎಂಪಿ ಸದಸ್ಯರಾದ ಮುರಗೇಶ್, ಕೆ.ಮಹೇಶ್ ಬಾಬು. ಬೆಳಿಗ್ಗೆ11.

ಜನಸೇವಾ ಸಂಸ್ಥೆ : ರಾಮಮಂದಿರ ಆಟದ ಮೈದಾನ, ಐದನೇ ಹಂತ ರಾಜಾಜಿನಗರ. ಕೆಂಪೇಗೌಡ ದಿನಾಚರಣೆ. ಅತಿಥಿಗಳು - ಜೆಡಿಎಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್. ಡಿ.ಕುಮಾರಸ್ವಾಮಿ, ಸಚಿವ ಎಸ್.ಸುರೇಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ವೈ.ಎಸ್. ವಿ.ದತ್ತ, ಮೇಯರ್ ಡಿ.ವೆಂಕಟೇಶಮೂರ್ತಿ. ಸಂಜೆ 6.

ಕೆನ್ ಕಲಾಶಾಲೆಯ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಶಿಗಳ ಸಂಘ : ವೆಂಕಟಪ್ಪ ಚಿತ್ರಶಾಲೆ, ಕಸ್ತೂರ ಬಾ ರಸ್ತೆ. ಹಿರಿಯ ವರ್ಣಚಿತ್ರ ಕಲಾವಿದೆ ಕನಕಾಮೂರ್ತಿ ಅವರಿಗೆ ಆರ್. ಎಂ.ಹಡಪದ್ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಚಿತ್ರಕಲಾ ಪ್ರದರ್ಶನ. ಅತಿಥಿಗಳು - ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ಕಲಾವಿದೆ ರೇಖಾರಾವ್. ಅಧ್ಯಕ್ಷತೆ - ಸಂಘದ ಅಧ್ಯಕ್ಷ ಜೆ.ಎಂ.ಎಸ್.ಮಣಿ. ಸಂಜೆ 4.

ಸತ್ಯಸಾಯಿ ಸೇವಾಸಂಸ್ಥೆ: ಬೃಂದಾವನ, ಕಾಡುಗೋಡಿ, ವೈಟ್‌ಫೀಲ್ಡ್. ಸುಚರಿತಾ ಚಂದ್ರಶೇಖರ್ ಅವರಿಂದ ಪ್ರವಚನ. ಸಂಜೆ 4.

ಭಾರತೀಯ ವೈದ್ಯಕೀಯ ಸಂಸ್ಥೆ ಮತ್ತು ಭಾರತೀಯ ಹೃದಯ ರೋಗ ತಜ್ಞರ ಸಂಸ್ಥೆ : ಸಂಸ್ಥೆಯ ಸಭಾಂಗಣ, ಆಲೂರು ವೆಂಕಟರಾವ್ ರಸ್ತೆ, ಟಿಪ್ಪು ಸುಲ್ತಾನ್ ಅರಮನೆ ಹತ್ತಿರ, ಚಾಮರಾಜಪೇಟೆ. ಹೃದಯ ಶಸ್ತ್ರಚಿಕಿತ್ಸಾ ತಜ್ಞರಾದ ಡಾ.ಸತ್ಯಕಿ ಅವರಿಂದ ಸಿ.ಎ.ಬಿ.ಜಿ ಶಸ್ತ್ರಚಿಕಿತ್ಸೆ ಬಗ್ಗೆ ಹಾಗೂ ಯೋಗವಸಿಸ್ತಾ ಸಂಶೋಧನಾ ಕೇಂದ್ರದ ನಿರ್ದೇಶಕ ಟಿ.ಎನ್. ಶಿವಕುಮಾರ್ ಅವರಿಂದ ದೇಹದ ಮನೋಭಾವ ಕುರಿತು ವೈದ್ಯಕೀಯ ಉಪನ್ಯಾಸ. ಸಂಜೆ 6.

ವರನಟ ರಾಜ್ ಕುಮಾರ್ ನಕ್ಷತ್ರ ಮಂಡಳಿ ಸಾಂಸ್ಕೃತಿಕ ಸಂಸ್ಥೆ: ಪುಟ್ಟಣ್ಣಚೆಟ್ಟಿ ಪುರಭವನ, ಜೆ.ಸಿ.ರಸ್ತೆ. ಡಾ.ರಾಜ್‌ಕುಮಾರ್ ಮತ್ತು ಅಂಬರೀಶ್ ಅವರ ಹುಟ್ಟುಹಬ್ಬದ ಆಚರಣೆ ಅಂಗವಾಗಿ ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಪ್ರತಿಭೋತ್ಸವ. ಬೆಳಿಗ್ಗೆ 9.

ದಿ ಮೆಲ್ಟಿಂಗ್ ಪಾಟ್ ಆಫ್ ಕಲ್ಚರ್: ಲಾಲ್‌ಬಾಗ್. ಜಾನ್ ದೇವರಾಜ್ ಅವರ ಮೆಲ್ಟಿಂಗ್ ಪಾಟ್ ತಯಾರಿಕೆಗೆ ಚಾಲನೆ. ಬೆಳಿಗ್ಗೆ 9.

ಮಹೇಶ್ ಲಲಿತಕಲಾ ಸಂಸ್ಥೆ : ನಂ.205, ಐದನೇ ಮುಖ್ಯರಸ್ತೆ, ಮೂರನೇ ಹಂತ, ಬಸವೇಶ್ವರ ನಗರ. ರಂಗೋತ್ಸವ ಹಾಗೂ ಡಾ.ಅಬ್ದುಲ್ ಕಲಾಂ ಪ್ರಶಸ್ತಿ ಪ್ರದಾನ ಸಮಾರಂಭ. ಅತಿಥಿಗಳು - ಕೊಳದಮಠದ ಶಾಂತವೀರ ಸ್ವಾಮೀಜಿ, ಲೇಖಕ ಚಂದ್ರಣ್ಣಗೌಡ, ದಲಿತ ಕ್ರಿಯಾ ಸಮಿತಿಯ ರಾಷ್ಟ್ರೀಯ ಘಟಕದ ಅಧ್ಯಕ್ಷ ಚಿ.ನಾ.ರಾಮು, ನಟಿ ರೂಪಿಕಾ. ಸಂಜೆ 6.

ಭಾರತೀಯ ಬ್ಯಾಂಕ್ ಅಧಿಕಾರಿಗಳ ಸಂಘಟನೆ : ಕೆಇಬಿ ಅಧಿಕಾರಿಗಳ ಸಂಘದ ಸಭಾಂಗಣ, ನಂ.28, ರೇಸ್‌ಕೋರ್ಸ್ ರಸ್ತೆ. ಸಂಘದ 17 ನೇ ಸಮಾವೇಶ. ಅತಿಥಿಗಳು - ಇಂಡಿಯನ್ ಬ್ಯಾಂಕ್‌ನ ಅಧ್ಯಕ್ಷ ಟಿ.ಎಂ. ಭಸೀನ್, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಮಿತಿಯ ಜಿ.ಡಿ.ನದಾಫ್. ಬೆಳಿಗ್ಗೆ 9.30.

ಕರ್ನಾಟಕ ಜೈನ್ ಅಸೋಸಿಯೇಷನ್ : ನಂ.81, ಕೆ.ಆರ್.ರಸ್ತೆ, ಶಂಕರಪುರ. ತಿಮ್ಮಪ್ಪ ಜೈನ್ ವಿದ್ಯಾರ್ಥಿ ನಿಲಯದ ಸಂಸ್ಥಾಪಕರ ದಿನಾಚರಣೆ. ಮುಖ್ಯ ಅತಿಥಿ - ಆಯುರ್ ಆಶ್ರಮದ ವಿಶ್ವ ಸಂತೋಷ್ ಭಾರತಿ. ಅಧ್ಯಕ್ಷತೆ - ಸಂಘದ ಅಧ್ಯಕ್ಷ ಜೀತೇಂದ್ರ ಕುಮಾರ್. ಸಂಜೆ 4.

ದಿ ಚೋಪ್ರಾಸ್ : ತಾಜ್ ವಿವಾಂತ ಹೋಟೆಲ್, ಮಹಾತ್ಮ ಗಾಂಧಿ ರಸ್ತೆ. ಜಾಗತಿಕ ಶಿಕ್ಷಣ ಸಂಯೋಜನಾ ಕಾರ್ಯಕ್ರಮ. ಬೆಳಿಗ್ಗೆ11.

ಬೆಂಗಳೂರು ಎಚ್‌ಐವಿ ಮತ್ತು ಏಡ್ಸ್ ಒಕ್ಕೂಟ : ಚಿಕ್ಕಲಾಲ್ ಬಾಗ್. ಅಂತರರಾಷ್ಟ್ರೀಯ ಮೇಣದ ಬತ್ತಿ ಸ್ಮರಣ ದಿನಾಚರಣೆ ಅಂಗವಾಗಿ ಚಿಕ್ಕಲಾಲ್ ಬಾಗ್‌ನಿಂದ ಬನ್ನಪ್ಪ ಉದ್ಯಾನವನದ ವರೆಗೆ ಮೇಣದ ಬತ್ತಿ ಮೆರವಣಿಗೆ. ಸಂಜೆ 5.30.

ಅನುಶ್ರುತ ಫೌಡೇಷನ್ ಟ್ರಸ್ಟ್ : ಬಿಬಿಎಂಪಿ ಆಟದ ಮೈದಾನ, ಅಂಬೇಡ್ಕರ್ ಕಾಲೇಜು ಎದುರು, ಕುರುಬರಹಳ್ಳಿ, ಜೆ.ಸಿ.ನಗರ. ಮಕ್ಕಳ ಜಾಗೃತಿ ಶಿಬಿರದ ಸಮಾರೋಪ ಸಮಾರಂಭ. ಅತಿಥಿಗಳು - ಗೀತರಚನೆಕಾರ ಗೀತಪ್ರಿಯ, ಗಾಯಕಿ ಲತಾ ಹಂಸಲೇಖ. ಸಂಜೆ 6.30.

ಜೈನ್ ವಿದ್ಯಾಸಂಸ್ಥೆಗಳ ಸಮೂಹ : ನಂ.34, ಒಂದನೇ ಅಡ್ಡರಸ್ತೆ, ಜೆ.ಸಿ.ರಸ್ತೆ. ಬೆಂಕಿ ಅನಾಹುತ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ. ಬೆಳಿಗ್ಗೆ 10.30.

ವಿನಾಯಕ ದೇವಸ್ಥಾನ ಸಮಿತಿ : ವಿನಾಯಕ ಸಭಾಂಗಣ, ಎರಡನೇ ಹಂತ, ಆರ್.ಟಿ.ನಗರ. ವಿಜಯಲಕ್ಷ್ಮೀ ಸರಳಾಯ ಅವರಿಂದ ಹಿಂದೂಸ್ತಾನಿ ಸಂಗೀತ ಗಾಯನ. ಮುಕುಂದ ಬುವಾ ಗೊರೆ (ಹಾರ್ಮೋನಿಯಂ), ಜಿತೇಂದ್ರ ಸಾಬಣ್ಣವರ್ (ತಬಲಾ). ಸಂಜೆ 5.30.

ನಾದಬ್ರಹ್ಮ ಪ್ರಾರ್ಥನಾ ಮಂದಿರ : ನಂ. 27/28, ಮೂರನೇ ಮಹಡಿ, ವೇಣುಗೋಪಾಲ ರೆಡ್ಡಿ ಬಡಾವಣೆ, ಬನ್ನೇರುಘಟ್ಟ ರಸ್ತೆ. ಕುಮಾರಿ ಟ.ಎಸ್.ಅಶ್ವಿನಿ ಅವರಿಂದ ಗಾಯನ. ತಬಲಾ - ಅಭಯ್ ಕುಲಕರ್ಣಿ, ಕೀಬೋರ್ಡ್  - ಅರ್ಚಿತಾ ಎಸ್. ರಾವ್. ಸಂಜೆ 5.

ಸಾತ್ವಿಕ : ಕೆ.ಎಚ್.ಕಲಾಸೌಧ, ಹನುಮಂತ ನಗರ. `ಕಾಂತ್ರಿ~ ನಾಟಕದ ಪ್ರದರ್ಶನ. ಸಂಜೆ 7.

ಸ್ಮೃತಿ: ಕನ್ನಡ ಭವನ, ಜೆ.ಸಿ.ರಸ್ತೆ. ಪಂಡಿತ್ ಆರ್.ವಿ.ಶೇಷಾದ್ರಿ ಗವಾಯಿ ಅವರ ಪುಣ್ಯತಿಥಿಯ ಅಂಗವಾಗಿ ತಬಲಾ ವಾದಕ ಪಂಡಿತ್ ಸಂಜೀವ ಪೊತೇದಾರ್‌ರ `ತಬಲಾವಾದನ ದರ್ಪಣ~ ಪುಸ್ತಕ ಬಿಡುಗಡೆ ಹಾಗೂ `ಸಂಗೀತ ಶಿರೋಮಣಿ~ ಪ್ರಶಸ್ತಿ ಪ್ರದಾನ ಸಮಾರಂಭ. ಅತಿಥಿಗಳು - ಅರಳುಮಲ್ಲಿಗೆ ಪಾರ್ಥಸಾರಥಿ, ತಬಲಾ ವಾದಕ ಪಂಡಿತ್ ರವೀಂದ್ರ ಯಾವಗಲ್. ಬೆಳಿಗ್ಗೆ 9.30.

ಸುಜಾತ ಸೂರ್ ಸ್ಮರಣ್: ಮಹಾರಾಷ್ಟ್ರ ಮಂಡಲ್ ಸಭಾಂಗಣ, ಎರಡನೇ ಅಡ್ಡರಸ್ತೆ, ಗಾಂನಗರ. ಪದ್ಮಾ ತಲ್ವಾಲ್‌ಕರ್ ಅವರಿಂದ ಹಿಂದೂಸ್ತಾನಿ ಸಂಗೀತ ಕಛೇರಿ. ಸಂಜೆ 6.

ವಿನೋದ ಸಾಂಸ್ಕೃತಿಕ ವೇದಿಕೆ: ಕೆನ್ ಕಲಾ ಶಾಲೆ, ಶೇಷಾದ್ರಿಪುರಂ, ಪೊಲೀಸ್ ಠಾಣೆ ಹಿಂಭಾಗ, ವಿಶ್ವ ತಾಯಂದಿರ ದಿನಾಚರಣೆಯ ಪ್ರಯುಕ್ತ ಕುಮಾರ್ ಕಲ್ಚರಲ್ ಅಕಾಡೆಮಿ ಕಲಾವಿದರಿಂದ ಮಾತೃಗೀತೆಗಳು. ಅಧ್ಯಕ್ಷತೆ - ಕಲಾವಿದ ರವಿಕಿರಣ್, ಅತಿಥಿಗಳು - ಸಾಹಿತಿ ಭಾಗ್ಯಲಕ್ಷ್ಮಿ ಮಗ್ಗೆ. ಬೆಳಿಗ್ಗೆ 10.30.

ಕವಿಗಳ ಅಂತರರಾಷ್ಟ್ರೀಯ ಸಂಘ: ವಲ್ಲಭ ನಿಕೇತನ, ಕುಮಾರ ಪಾರ್ಕ್ ಪೂರ್ವ, ಗಾಂ ಭವನದ ಹತ್ತಿರ, ಶಿವಾನಂದ ವೃತ್ತ. ತಿಂಗಳ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ - ಹಿಂದಿ ಕವಿ ಟಿ.ಜಿ.ಪ್ರಭಾಶಂಕರ್ ಪ್ರೇಮಿ, ಅತಿಥಿ - ಲೇಖಕಿ ರಾಣಿ ಗೋವಿಂದರಾಜು. ಬೆಳಿಗ್ಗೆ 10.30.

ಸುಚಿತ್ರ: ಕಿ.ರಂ.ನುಡಿಮನೆ, ತಿಂಗಳ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಸ್ತೋತ್ರ ಸಾಹಿತ್ಯದ ಬಗ್ಗೆ ವಿಮರ್ಶಕ ಸಿ.ಎನ್.ರಾಮಚಂದ್ರನ್ ಅವರಿಂದ ಉಪನ್ಯಾಸ. ಪ್ರತಿಕ್ರಿಯೆ - ವಿಮರ್ಶಕ ಜೆ. ಶ್ರೀನಿವಾಸಮೂರ್ತಿ, ಸಾಹಿತಿ ಎನ್.ಎಸ್. ಶ್ರೀಧರಮೂರ್ತಿ. ಸಂಜೆ 5.

ಗಾಯನ ಸಮಾಜ: ಕೃಷ್ಣರಾಜೇಂದ್ರ ರಸ್ತೆ, ಮೋಹನ್ ಸಂತಾನಮ್ ಅವರಿಂದ ಗಾಯನ, ಮೈಸೂರು ದಯಾಕರ್ (ಪಿಟೀಲು), ಬಿ.ಎಸ್. ಆನಂದ್ (ಮೃದಂಗ), ಎನ್. ಅಮೃತ್ ಕುಮಾರ್ (ಮೋರ್ಚಿಂಗ್). ಸಂಜೆ 5.

ಚಿನ್ಮಯ ಮಿಷನ್: ಸ್ನೇಹ ಭವನ, ಬಿ.ಬ್ಲಾಕ್, ಸಹಕಾರನಗರ, ಭಗವದ್ಗೀತೆ ಏಳನೇ ಅಧ್ಯಾಯ ಕುರಿತು ಸುಧರ್ಮ ಚೈತನ್ಯ ಅವರಿಂದ ಪ್ರವಚನ. ಸಂಜೆ 6.30.

ಸಾಯಿ ಗೀತಾಂಜಲಿ: ಸತ್ಯಸಾಯಿ ಸೇವಾಕ್ಷೇತ್ರ, 21ನೇ ಮುಖ್ಯರಸ್ತೆ, ಏಳನೇ ಕ್ರಾಸ್, ಜೆ.ಪಿ.ನಗರ. ಭಜನೆ ಕಾರ್ಯಕ್ರಮ. ಸಂಜೆ 6.15.

ಶನಿದೇವರ ದೇವಾಲಯ ಮತ್ತು ರಾಮಕೃಷ್ಣ ಭಜನಾ ಮಂದಿರ: ಎರಡನೇ ಅಡ್ಡರಸ್ತೆ, ಮುನೇಶ್ವರ ಬ್ಲಾಕ್, ಪ್ಯಾಲೇಸ್ ಗುಟ್ಟಹಳ್ಳಿ. ಶನೀಶ್ವರ ಸ್ವಾಮಿ ಜಯಂತಿ ಪ್ರಯುಕ್ತ ಬೆಳಿಗ್ಗೆ 5ಕ್ಕೆ ತೈಲಾಭಿಷೇಕ, ಪಂಚಾಮೃತ ರುದ್ರಾಭಿಷೇಕ, ಬೆಳಿಗ್ಗೆ 6.30ಕ್ಕೆ ಕಳಸ ಆರಾಧನೆ, ಶನಿಶಾಂತಿ ರುದ್ರಹೋಮ, ಬೆಳಿಗ್ಗೆ 10ಕ್ಕೆ

ಮಹಾಮಂಗಳಾರತಿ, ಸಂಜೆ 7ಕ್ಕೆ ಟಿ.ಎಚ್.ರಾಯಪ್ಪ ಇವರಿಂದ `ರಾಜವಿಕ್ರಮ~ ಅಥವಾ `ಶನಿಪ್ರಭಾವ~ ಕಥಾಕಲಾಕ್ಷೇಪ. ಮಲ್ಲೇಪುರಂ ಕೃಷ್ಣಮೂರ್ತಿ (ಹಾರ್ಮೋನಿಯಂ), ಶ್ರೀನಿವಾಸ್ (ತಬಲಾ).
ರಂಗಶಂಕರ: 8ನೇ ಕ್ರಾಸ್, ಜೆ.ಪಿ.ನಗರ, 2ನೇ ಹಂತ, `ರಾಬಿನ್‌ಸನ್ ಅಂಡ್ ಕ್ರೂಸೋ~ ನಾಟಕ ಪ್ರದರ್ಶನ. ನಿರ್ದೇಶನ-ಗ್ರೇಶಿಯಸ್ ದೇವರಾಜ್. ಮಧ್ಯಾಹ್ನ 3.30.

ಕಣಗಾಲ್ ನೃತ್ಯಾಲಯ ಮತ್ತು ರಾಗಶ್ರೀ ಮ್ಯೂಸಿಕ್ ಅಕಾಡೆಮಿ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ರಾಮು ಕಣಗಾಲ್ ಅವರ ಶಿಷ್ಯೆ ರಾಗಶ್ರೀ ಪ್ರಸಾದ್ ಅವರಿಂದ ನೃತ್ಯ ಪ್ರದರ್ಶನ. ಅತಿಥಿಗಳು - ಗಾಯಕರಾದ ಲಲಿತಾ ಶ್ರೀನಿವಾಸನ್, ಶ್ಯಾಮಲಾ ಜಿ. ಭಾವೆ, ಕವಿ ಎಚ್.ಎಸ್.ವೆಂಕಟೇಶಮೂರ್ತಿ. ಸಂಜೆ 6.30.

ದ್ರೌಪದಿ ಅಮ್ಮ ದೇವಾಲಯ : ವಿ.ಆರ್.ನಾಯ್ಡು ನಗರ, ಶ್ರೀರಾಂಪುರ. ಕರಗ ಮಹೋತ್ಸವ. ಅತಿಥಿ- ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್. ರಾತ್ರಿ 8.15

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.