ADVERTISEMENT

‘ನಾಸಾ’ ನೋಡಿ ಬಂದ ಯೂರೊ ಸ್ಕೂಲ್‌

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 19:47 IST
Last Updated 25 ಜೂನ್ 2019, 19:47 IST
ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆಯ ಕೇಂದ್ರ ಕಚೇರಿ ಎದುರು ಯೂರೊಸ್ಕೂಲ್‌ ವಿದ್ಯಾರ್ಥಿಗಳು
ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆಯ ಕೇಂದ್ರ ಕಚೇರಿ ಎದುರು ಯೂರೊಸ್ಕೂಲ್‌ ವಿದ್ಯಾರ್ಥಿಗಳು   

ಬೆಂಗಳೂರು:ನಗರದ ಯೂರೊ ಸ್ಕೂಲ್‌ ತನ್ನ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ವಿಭಿನ್ನ ಅನುಭವವೊಂದನ್ನು ನೀಡಿದೆ. ಶಾಲೆ ವತಿಯಿಂದ ಅಮೆರಿಕದ ‘ನಾಸಾ’ಗೆ ಪ್ರವಾಸ ಆಯೋಜಿಸಲಾಗಿತ್ತು.

ಏಪ್ರಿಲ್‌ನಲ್ಲಿ 23 ವಿದ್ಯಾರ್ಥಿಗಳು ಹತ್ತು ದಿನಗಳ ಪ್ರವಾಸ ಕೈಗೊಂಡಿದ್ದರು. ಫ್ಲೋರಿಡಾದಲ್ಲಿನ ನಾಸಾ ಕೇಂದ್ರ ಕಚೇರಿಯನ್ನು ನೋಡಿ, ಅಲ್ಲಿನ ತಜ್ಞರನ್ನು ಮಾತನಾಡಿಸಿ ಬಂದಿರುವ ವಿದ್ಯಾರ್ಥಿಗಳು, ಬಾಹ್ಯಾಕಾಶ ವಿಜ್ಞಾನದ ಜ್ಞಾನವನ್ನು ತಿಳಿದುಕೊಂಡು ಬಂದಿದ್ದಾರೆ. ಈ ಶೈಕ್ಷಣಿಕ ಪ್ರವಾಸವು ಅವರಿಗೆ ಪ್ರಾಯೋಗಿಕ ಅನುಭವವನ್ನೂ ನೀಡಿದೆ.

ವಿಜ್ಞಾನಿಗಳು ಹಾಗೂ ಗಗನಯಾತ್ರಿಗಳೊಂದಿಗೆ ಚರ್ಚೆ ನಡೆಸಿರುವ ವಿದ್ಯಾರ್ಥಿಗಳು, ವಾಷಿಂಗ್ಟನ್‌ ಕೂಡ ನೋಡಿ ಬಂದಿದ್ದಾರೆ. ಅಲ್ಲಿನ ಆಡಳಿ ತಾತ್ಮಕ ಕಟ್ಟಡಗಳು, ಸ್ಮಾರಕಗಳು, ಶ್ವೇತಭವನ, ಅಬ್ರಹಾಂ ಲಿಂಕನ್‌ ಹಾಗೂ ಮಾರ್ಟಿನ್‌ ಲೂಥರ್‌ ಕಿಂಗ್ ಸ್ಮಾರಕ, ಎರಡನೇ ಮಹಾಯುದ್ಧದ ಸ್ಮಾರಕಗಳಿಗೆ ಭೇಟಿ ನೀಡುವ ಮೂಲಕ ಇತಿಹಾಸದ ಬಗ್ಗೆಯೂ ತಿಳಿದುಕೊಂಡು ಬಂದಿದ್ದಾರೆ. ನ್ಯೂಯಾರ್ಕ್‌ನಲ್ಲಿ ಟೈಮ್ಸ್‌ ಸ್ಕ್ವೇರ್, ವಾಲ್‌ಸ್ಟ್ರೀಟ್‌ ಬುಲ್‌, 9/11ರ ದಾಳಿಯ ಸ್ಮಾರಕ, ಸ್ವಾತಂತ್ರ್ಯ ಪ್ರತಿಮೆಯನ್ನು ವಿದ್ಯಾರ್ಥಿಗಳು ಕಣ್ತುಂಬಿಕೊಂಡು ಬಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.