ಕೆಂಗೇರಿ: `ಯಾರೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರೂ ಅಧಿಕಾರ ನಿರೀಕ್ಷಿಸದೆ ನಿಷ್ಠೆಯಿಂದ ದುಡಿದಾಗ ಉನ್ನತ ಸ್ಥಾನಗಳು ಅರಸಿಕೊಂಡು ಬರುತ್ತವೆ~ ಎಂದು ಶಾಸಕ ಎಂ.ಕೃಷ್ಣಪ್ಪ ಅಭಿಪ್ರಾಯಪಟ್ಟರು.
ಮಾಗಡಿ ರಸ್ತೆಯ ಕಾವೇರಿಪುರ ರಾಜೀವ್‌ನಗರದ ಬಿಡಿಎ ಬಡಾವಣೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಂಡ ನಂತರ ಅವರು ಮಾತನಾಡಿದರು.
`ಕಾಂಗ್ರೆಸ್ ಸಿದ್ದಾಂತ ನಂಬಿ ಪಕ್ಷ ಸೇರುವವರಿಗೆ ಸದಾ ಸ್ವಾಗತ ಕೋರಲಾಗುವುದು. ಪಕ್ಷದಲ್ಲಿ ಉತ್ತಮ ಸಂಘಟನೆ ಮಾಡಿದವರಿಗೆ ಉನ್ನತ ಸ್ಥಾನ ದೊರಕಿಸಿ ಕೊಡಲಾಗುತ್ತದೆ~ ಎಂದರು.
ಶಾಸಕ ಪ್ರಿಯಾಕೃಷ್ಣ, ಪಾಲಿಕೆ ಮಾಜಿ ಸದಸ್ಯ ಬಿ.ಕೃಷ್ಣಪ್ಪ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಪ್ಪ, ಮುಖಂಡ ಲಕ್ಷ್ಮಣ್‌ಗೌಡ, ಸಂಪತ್ ಇತರರು ಹಾಜರಿದ್ದರು.
ಮುನೇಶ್ವರ ನಗರ ಬಡಾವಣೆ, ಕನಕನಗರ, ಪಟ್ಟೇಗಾರಪಾಳ್ಯ ಸೇರಿದಂತೆ ಹಲವಾರು ಬಡಾವಣೆಗಳ ಕಾರ್ಯಕರ್ತರಾದ ಅಶೋಕ್, ಮಂಜು, ವೇಲು, ಶಮೀರ್ ಸೇರಿದಂತೆ ವಿವಿಧ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.