ADVERTISEMENT

ನುಡಿ ತೇರಿಗೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 20:10 IST
Last Updated 21 ಜನವರಿ 2011, 20:10 IST

ಕೆಂಗೇರಿ: ನಾಡು ನುಡಿಯ ರಕ್ಷಣೆಗಾಗಿ ಹೊರಟಿರುವ ಕನ್ನಡ ನುಡಿ ತೇರು ಜಾಗೃತಿ ಜಾಥಾವನ್ನು ಕೆಂಗೇರಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಇಲ್ಲಿನ ಕೃಷ್ಣಪ್ರಿಯ ಕಲ್ಯಾಣ ಮಂಟಪದ ಬಳಿ ನುಡಿ ತೇರಿಗೆ ಸುಮಂಗಲಿಯರಿಂದ ಪೂರ್ಣ ಕುಂಭದಿಂದ ಬರ ಮಾಡಿಕೊಳ್ಳಲಾಯಿತು.

ಜಾಥಾದಲ್ಲಿ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು. ನೂರಾರು ಬೈಕ್‌ಗಳಲ್ಲಿ ಕನ್ನಡ ಪ್ರೇಮಿಗಳು ಕನ್ನಡದ ಧ್ವಜದೊಂದಿಗೆ ಪಾಲ್ಗೊಂಡಿದ್ದರು. ಕೆಂಗೇರಿಯ ಶಾಲಾ ಮಕ್ಕಳು ಬ್ಯಾಂಡ್ ಬಾರಿಸುವ ಮೂಲಕ ಕನ್ನಡ ಅಭಿಮಾನಿಗಳು ಜಾಥಾದೊಂದಿಗೆ ಹೆಜ್ಜೆ ಹಾಕಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು, ವಿಧಾನ ಪರಿಷತ್ತಿನ ಸದಸ್ಯ ಪ್ರೊ.ದೊಡ್ಡರಂಗೇಗೌಡ, ಬಿಬಿಎಂಪಿ ಸದಸ್ಯ ಆಂಜನಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಯಶವಂತಪುರ ವಿಧಾನ ಸಭಾ ಕ್ಷೇತ್ರ ಘಟಕದ ಅಧ್ಯಕ್ಷ ಅಧ್ಯಕ್ಷ ಎಚ್.ಎಸ್.ಸುಧೀಂದ್ರ ಕುಮಾರ್, ಪದಾಧಿಕಾರಿಗಳಾದ ನಿತೀಶ್‌ಗೌಡ, ಎ.ಎನ್.ಶಿವಸ್ವಾಮಿ, ರತ್ನ ರಾಘವನ್, ಮೋಹನ್, ನಾಗರಾಜ್, ಜೆ.ರಮೇಶ್, ವಿ.ವಿ.ಸತ್ಯನಾರಾಯಣ, ಕೆ.ಜಿ.ಗೋಪಾಲಕೃಷ್ಣ ಗಾಂಧಿ, ಬ.ರಾಜಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.