ADVERTISEMENT

ನೇಣಿಗೆ ಶರಣು

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 19:48 IST
Last Updated 14 ಜೂನ್ 2013, 19:48 IST

ಬೆಂಗಳೂರು: ನಗರದ ಆಸ್ಟಿನ್ ಟೌನ್‌ನಲ್ಲಿ ಗುರುವಾರ ಎಸ್.ರಾಹುಲ್ (14) ಎಂಬ ವಿದ್ಯಾರ್ಥಿ ನೇಣು ಹಾಕಿಕೊಂಡಿದ್ದು, ಕಾವೇರಿಪುರದಲ್ಲಿ ವಿದ್ಯಾ (22) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುನಿಲ್‌ಕುಮಾರ್ ಮತ್ತು ಉಷಾ ದಂಪತಿಯ ಮಗನಾದ ರಾಹುಲ್, ನಗರದ ಖಾಸಗಿ ಶಾಲೆಯೊಂದರಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ. ಆತ ಮಧ್ಯಾಹ್ನ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾನೆ. ಘಟನೆ ವೇಳೆ ಸುನಿಲ್ ಅವರು ಪೇಂಟಿಗ್ ಕೆಲಸಕ್ಕೆ ಹೋಗಿದ್ದರು. ತಾಯಿ ಮನೆಗೆಲಸಕ್ಕೆ ಹೋಗಿದ್ದರು. ತಂಗಿ ರಚನಾ ಟ್ಯೂಷನ್‌ಗೆ ಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಆತ 9ನೇ ತರಗತಿಯಲ್ಲಿ ಇಂಗ್ಲಿಷ್, ಗಣಿತ ಮತ್ತು ಹಿಂದಿ ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದರಿಂದ ಸಾಕಷ್ಟು ಖಿನ್ನತೆಗೆ ಒಳಗಾಗಿದ್ದ' ಎಂದು ರಾಹುಲ್ ಪೋಷಕರು ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾರೆ.ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.