ADVERTISEMENT

ಪದಾಧಿಕಾರಿಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 18:55 IST
Last Updated 7 ಮಾರ್ಚ್ 2011, 18:55 IST

ಯಲಹಂಕ: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ದಲಿತ ಸಂಘರ್ಷ ಸಮಿತಿ (ಸಂಯೋಜಕ) ರಾಜ್ಯ ಸಂಯೋಜಕರಾದ ವಿ.ನಾಗರಾಜ್ ನೇತೃತ್ವದಲ್ಲಿ ನಡೆದ ಬೆಂಗಳೂರು ಜಿಲ್ಲಾ ಸಮಿತಿಯ ಸಭೆಯಲ್ಲಿ ಬೆಂಗಳೂರು ಜಿಲ್ಲಾ ಮತ್ತು ಉತ್ತರ ತಾಲ್ಲೂಕು ಸಮಿತಿಗಳಿಗೆ ನೂತನವಾಗಿ ಈ ಕೆಳಕಂಡ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಬೆಂಗಳೂರು ಜಿಲ್ಲಾ ಸಮಿತಿ ಸಂಯೋಜಕರಾಗಿ ಎಂ.ರಮೇಶ್, ಸಂಘಟನಾ ಸಂಯೋಜಕರಾಗಿ ಬಿ.ಶ್ರೀನಿವಾಸ್, ಮುನಿರಾಮಯ್ಯ, ಖಜಾಂಚಿ-ಕೆ.ನಾಗರಾಜು, ಸದಸ್ಯರಾಗಿ ರಾಮದಾಸ್, ನಾಗರಾಜು, ಸುಬ್ಬಣ್ಣ, ಧರ್ಮ, ನಾರಾಯಣ ಸ್ವಾಮಿ ಹಾಗೂ ಮಹಿಳಾ ಘಟಕದ ಸದಸ್ಯರಾಗಿ ಯಶೋದಮ್ಮ ಅವರನ್ನು ಆಯ್ಕೆ ಮಾಡಲಾಯಿತು.

ಬೆಂಗಳೂರು ಉತ್ತರ ತಾಲ್ಲೂಕು ಸಮಿತಿಯ ಸಂಯೋಜಕರಾಗಿ ಚಂದ್ರಶೇಖರ್, ಸಂಘಟನಾ ಸಂಯೋಜಕರಾಗಿ ಡೇವಿಡ್, ತಿಮ್ಮರಾಯಪ್ಪ, ಖಜಾಂಚಿ- ಜಗದೀಶ್, ಸದಸ್ಯರಾಗಿ ಧನರಾಜ್, ಮುನಿಆಂಜಿನಪ್ಪ, ಶಿವಣ್ಣ, ನಾಗರಾಜ್, ಕನಕರಾಜ್, ವಿದ್ಯಾರ್ಥಿ ಘಟಕದ ಸದಸ್ಯರಾಗಿ ಅಂಜುಕುಮಾರ್ ಹಾಗೂ ಮಹಿಳಾ ಘಟಕದ ಸದಸ್ಯರಾಗಿ ಅಲುಮೇಲಮ್ಮ ಅವರನ್ನು ನೇಮಕ ಮಾಡಲಾಯಿತು.ರಾಜ್ಯ ಸಮಿತಿಯ ಹೆಬ್ಬಾಳ ವೆಂಕಟೇಶ್, ಸಂಯೋಜಕ ಸಮಿತಿಯ ಹಿರಿಯ ಮುಖಂಡ ಡಿ.ರಾಜಣ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.