ADVERTISEMENT

ಪೆನೇಷಿಯಾ ಆಸ್ಪತ್ರೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

ಕೆಂಗೇರಿ: `ನಾವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರಿದಂತೆಲ್ಲಾ ಹೊಸ ಹೊಸ ಕಾಯಿಲೆಗಳು ಉಲ್ಬಣಗೊಳ್ಳುತ್ತಿರುವುದು ಆತಂಕಕಾರಿ ಸಂಗತಿ~ ಎಂದು ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ನಾಗರಬಾವಿಯಲ್ಲಿ ನೂತನ ಪೆನೇಷಿಯಾ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, `ಪ್ರತಿಯೊಬ್ಬರೂ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸುವ ಅಗತ್ಯವಿದೆ~ ಎಂದು ಸಲಹೆ ಮಾಡಿದರು.

`ಮನುಷ್ಯನ ದೇಹ ಯಂತ್ರವಿದ್ದಂತೆ. ಯಂತ್ರವು ಕೆಟ್ಟು ರೋಗಿಯು ಮೆಕ್ಯಾನಿಕ್ ಎಂಬ ವೈದ್ಯರನ್ನು ನಂಬಿ ಬಂದಾಗ ಉತ್ತಮ ಚಿಕಿತ್ಸೆ ನೀಡಿ ಕಳಿಸಬೇಕು~ ಎಂದು ಶ್ರೀಗಳು ಕರೆ ನೀಡಿದರು.

ಸಚಿವ ವಿ.ಸೋಮಣ್ಣ, ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್, ಶಾಸಕ ಎಂ.ಕೃಷ್ಣಪ್ಪ, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಜಯಣ್ಣ, ಪ್ರೊ.ರಾಧಾಕೃಷ್ಣ, ಪಾಲಿಕೆ ಸದಸ್ಯರಾದ ಉಮೇಶ್ ಶೆಟ್ಟಿ, ವೆಂಕಟೇಶ್‌ಬಾಬು, ರಂಗಣ್ಣ, ಮಾಜಿ ಉಪ ಮೇಯರ್ ಪುಟ್ಟರಾಜು ಮುಂತಾದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.