ADVERTISEMENT

ಪ್ರತಿಭಟನೆ ಮನೋಭಾವ ಬೆಳೆಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2012, 18:50 IST
Last Updated 15 ನವೆಂಬರ್ 2012, 18:50 IST

ನೆಲಮಂಗಲ: ಯಾವುದೇ ರೀತಿಯ ಹಿಂಸೆಯನ್ನು ಸಹಿಸಿಕೊಳ್ಳದೆ ಪ್ರತಿಭಟಿಸುವ ಮನೋಭಾವವನ್ನು ಯುವಕರು ಬೆಳೆಸಿಕೊಳ್ಳಬೇಕು ಎಂದು ಸಬ್ ಇನ್‌ಸ್ಪೆಕ್ಟರ್ ನವೀನ್‌ಕುಮಾರ್ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಯಂಟಗಾನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ `ಬಾಲ್ಯ ವಿವಾಹದಿಂದಾಗಿ ಶಿಕ್ಷಣ ಮತ್ತು ಬಾಲ್ಯ ಕಳೆದುಕೊಳ್ಳುತ್ತಿರುವ ಹೆಣ್ಣು ಮಕ್ಕಳು~ ಕುರಿತ ಚರ್ಚಾ ಸ್ಪರ್ಧೆಯನ್ನು ಉದ್ಘಾಟಿಸಿ  ಅವರು ಮಾತನಾಡಿದರು.

ವಕೀಲರಾದ ರೇಣುಕಾದೇವಿ ಮಾತನಾಡಿ, `ಮಕ್ಕಳ ಹಕ್ಕುಗಳನ್ನು ಗೌರವಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಿದೆ~ ಎಂದರು.

ತಾಲ್ಲೂಕಿನ 12 ಪದವಿ ಪೂರ್ವ ಕಾಲೇಜುಗಳಿಂದ ಭಾಗವಹಿಸಿದ್ದ 24 ಮಂದಿ ವಾಕ್ಪಟುಗಳಲ್ಲಿ ಪ್ರಿಯದರ್ಶಿನಿ ಕಾಲೇಜಿನ ದಿವ್ಯಾ ಪ್ರಥಮ, ಶಿವಗಂಗೆಯ ಶಿವಗಂಗಾ ಕಾಲೇಜಿನ ಹೇಮಲತಾ ದ್ವಿತೀಯ ಹಾಗೂ  ಯಂಟಗಾನಹಳ್ಳಿ ಕಾಲೇಜಿನ ಭಾಗ್ಯ ತೃತೀಯ ಸ್ಥಾನಗಳಿಸಿ ನಗದು ಬಹುಮಾನ ಪಡೆದರು. ಅಧ್ಯಾಪಕರಾದ ಜಗದೀಶ್ವರಯ್ಯ, ಅಬ್ದುಲ್ ವಹೀದ್, ಅನುಸೂಯಮ್ಮ ತೀರ್ಪುಗಾರರಾಗಿದ್ದರು.

ಮುಖ್ಯ ಶಿಕ್ಷಕ ಡಿ.ಶ್ರೀನಿವಾಸಯ್ಯ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಬಿ.ಮಧುಸೂಧನ್ ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.