ADVERTISEMENT

ಪ್ರತಿ ವಾರ್ಡ್‌ನಲ್ಲಿ ಉದ್ಯಾನ ಮಾಡುವ ಅಭಿಯಾನ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 19:30 IST
Last Updated 3 ಏಪ್ರಿಲ್ 2012, 19:30 IST

ಬೆಂಗಳೂರು: ನಗರದ ಪ್ರತಿ ವಾರ್ಡಿನಲ್ಲಿ ಆಟದ ಮೈದಾನ, ಉದ್ಯಾನ ಮತ್ತು ಕೆರೆ ನಿರ್ಮಾಣ ಮಾಡುವ ಅಭಿಯಾನಕ್ಕೆ ಎಲ್ಲ ಪಾಲಿಕೆ ಸದಸ್ಯರು ಕೈ ಜೋಡಿಸಬೇಕು ಎಂದು ಸಂಸದ ಅನಂತಕುಮಾರ್ ಹೇಳಿದರು.

ಸಂಸದರ ನಿಧಿಯಿಂದ ಎಸ್‌ಡಿಎಸ್ ಕ್ಷಯ ಮತ್ತು ರಾಜೀವ್ ಗಾಂಧಿ ಎದೆರೋಗಿಗಳ ಸಂಶೋಧನಾ ಕೇಂದ್ರದ ಆವರಣದಲ್ಲಿ ಅಭಿವೃದ್ಧಿಪಡಿಸಿದ ಉದ್ಯಾನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕೃತಿಗೆ ಪೂರಕವಾಗಿ ಬದುಕುವ ಕುರಿತು ಗಾಂಧೀಜಿ ಕನಸು ಕಂಡಿದ್ದರು. ಕೇವಲ ದೊಡ್ಡ ದೊಡ್ಡ ಕಟ್ಟಡ ಹಾಗೂ ಮಾಲ್‌ಗಳಿಂದ ಕ್ರಾಂಕೀಟ್ ನಗರವನ್ನಾಗಿ ರೂಪಿಸುತ್ತಿದ್ದೇವೆ. ಹಸಿರು ಉಳಿಸುವ ಬೆಳೆಸುವ ಜವಾಬ್ದಾರಿ ನಾಗರಿಕರ ಮೇಲಿದೆ ಎಂದು ತಿಳಿಸಿದರು.

ಸಂಶೋಧನಾ ಕೇಂದ್ರದ ಆವರಣದಲ್ಲಿ ಇನ್ನೊಂದು ಉದ್ಯಾನ ನಿರ್ಮಿಸಲು 6 ಲಕ್ಷ ರೂಪಾಯಿ ಧನ ಸಹಾಯ ನೀಡುವುದಾಗಿ ಭರವಸೆ ನೀಡಿದರು. ಕೇಂದ್ರದ ನಿರ್ದೇಶಕ ಡಾ.ಶಶಿಧರ್ ಬುಗ್ಗಿ, ಶಾಸಕ ಡಾ. ಡಿ.ಹೇಮಚಂದ್ರಸಾಗರ್, ಪಾಲಿಕೆ ಸದಸ್ಯೆ ಗಂಗಾಂಬಿಕೆ ಮಲ್ಲಿಕಾರ್ಜುನ, ತೇಜಸ್ವಿನಿ ಅನಂತಕುಮಾರ್ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.