ADVERTISEMENT

ಫುಡ್‌ವರ್ಲ್ಡ್‌ನಲ್ಲಿ ಕಳಪೆ ಆಹಾರ ಪದಾರ್ಥ

ಬಿಬಿಎಂಪಿ ಅಧಿಕಾರಿಗಳಿಂದ ದಾಳಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 19:30 IST
Last Updated 7 ಡಿಸೆಂಬರ್ 2013, 19:30 IST

ಬೆಂಗಳೂರು: ಅವಧಿ ಮುಗಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡು ತ್ತಿದ್ದ ಮಲ್ಲೇಶ್ವರದ ಸಂಪಿಗೆರಸ್ತೆಯ ಫುಡ್‌ವರ್ಲ್ಡ್ ಸೂಪರ್‌ ಮಾರ್ಕೆಟ್‌ ಮೇಲೆ ಶನಿವಾರ ದಾಳಿ ನಡೆಸಿರುವ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಮಳಿಗೆ ಮಾಲೀಕರಿಂದ ರೂ 50 ಸಾವಿರ ದಂಡ ವಸೂಲಿ ಮಾಡಿದ್ದಾರೆ.

ಮಳಿಗೆಯಲ್ಲಿ ಅವಧಿ ಮುಗಿದ ಚೀಸ್ ಹಾಗೂ  ಹುಳುಗಳಿರುವ ರವೆಯನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಸಾರ್ವಜ ನಿಕರಿಂದ ದೂರು ಬಂದಿತ್ತು.

ದೂರಿನ ಆಧಾರದ ಮೇಲೆ ದಾಳಿ ನಡೆಸಿ, ಅವಧಿ ಮುಗಿದಿದ್ದ ಆಹಾರ ಪದಾರ್ಥಗಳನ್ನು ವಶ ಪಡಿಸಿಕೊಳ್ಳ ಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

40 ಮೈಕ್ರಾನ್‌ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್‌ ವಶ: ಗಾಣಿಗರಪೇಟೆಯ ಫುಟ್‌ಮಾಲ್‌ ಮೇಲೆ ಶನಿವಾರ ದಾಳಿ ಮಾಡಿ 40 ಮೈಕ್ರಾನ್‌ಗಿಂತ ಕಡಿಮೆ ದಪ್ಪವಿದ್ದ 150 ಕೆ.ಜಿ ಪ್ಲಾಸ್ಟಿಕ್‌ ಚೀಲ ಗಳನ್ನು ವಶಪಡಿಸಿಕೊಂಡಿರುವ ಬಿಬಿ ಎಂಪಿ ಅಧಿಕಾರಿಗಳು ಮಳಿಗೆಯ ಮಾಲೀಕರಿಂದ ₨ 50 ಸಾವಿರ ದಂಡ ವಸೂಲಿ ಮಾಡಿದ್ದಾರೆ.

14 ಅನಧಿಕೃತ ಜಾಹೀರಾತು ಫಲಕಗಳ ತೆರವು
ಬೆಂಗಳೂರು: ನಗರದ ವಿವಿಧೆಡೆ ಶನಿವಾರ ಕಾರ್ಯಾಚರಣೆ ನಡೆಸಿದ ಬಿಬಿಎಂಪಿ ಅಪೀಲುಗಳ ಸ್ಥಾಯಿ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು 14 ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಿದ್ದಾರೆ.

‘ಮಲ್ಲೇಶ್ವರ, ವಿಜಯನಗರ, ಗಾಂಧಿನಗರ, ರಾಜಾಜಿನಗರ ಮತ್ತು ಮಹಾ ಲಕ್ಷ್ಮೀ ಲೇಔಟ್‌ನಲ್ಲಿ ಕಾರ್ಯಾಚರಣೆ ನಡೆಸಿ ಅನಧಿಕೃತ ಜಾಹೀರಾತು ಫಲಕ ಗ ಳನ್ನು ತೆರವುಗೊಳಿಸಲಾಯಿತು. ನಗರದಲ್ಲಿ ಅನಧಿಕೃತವಾಗಿ ಜಾಹೀ ರಾತು ಫಲ ಕಗಳನ್ನು ಹಾಕುವುದು ಹೆಚ್ಚಾಗಿದೆ.

ಅನಧಿಕೃತ ಜಾಹೀರಾತು ಫಲಕ ಹಾಕುವವರ ವಿರುದ್ಧ ಮುಂದಿನ ದಿನಗಳಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಸಮಿತಿ ಅಧ್ಯಕ್ಷ ಆರ್‌.ಚಂದ್ರಶೇಖರಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT