ADVERTISEMENT

`ಬಿಎಂಟಿಸಿ ದರ ಏರಿಕೆ ಅವೈಜ್ಞಾನಿಕ'

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 19:59 IST
Last Updated 1 ಜೂನ್ 2013, 19:59 IST

ಕೃಷ್ಣರಾಜಪುರ: `ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಹಿರಿಯ ಪ್ರಯಾಣಿಕರ ಬಸ್‌ಪಾಸಿನ ದರ ಏರಿಸುವ ಮೂಲಕ ಕೆಳ-ಮಧ್ಯಮ ಹಾಗೂ ಹಿರಿಯ ನಾಗರಿಕರ ಮೇಲೆ ಗದಾಪ್ರಹಾರ ಎಸಗಿದೆ. ದರ ಏರಿಕೆಯನ್ನು ಸರ್ಕಾರ ಪುನರ್ ಪರಿಶೀಲಿಸಬೇಕು' ಎಂದು ಹಿರಿಯ ನಾಗರಿಕರ ಸಂಘಟನೆ ಒತ್ತಾಯಿಸಿದೆ.

`ಮಾಸಿಕ ದರವನ್ನು ಒಂದು ನೂರು ರೂಪಾಯಿಗೆ, ಹಿರಿಯರ ಪಾಸಿನ ದರವನ್ನು 90 ರೂಪಾಯಿಗೆ ಏರಿಸಲಾಗಿದೆ. ದಿನದ ಪಾಸುಗಳ ದರದಲ್ಲೂ ಗಣನೀಯ ಏರಿಕೆಯಾಗಿದೆ' ಎಂದು ಸಂಘಟನಾ ಕಾರ್ಯದರ್ಶಿ ಸೋಮಶೇಖರ್ ದೂರಿದರು.

`ಹೊಸ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಖಾಸಗಿಯವರಿಗೆ ವಹಿಸಲಾಗಿದೆ. ಸಮರ್ಪಕ ಆಸನ ವ್ಯವಸ್ಥೆ ಇಲ್ಲದ, ಬಾಗಿಲು ಸರಿಯಿರದ, ಬಣ್ಣ ಬಳಿದ ಹಳೆಯ ಬಸ್‌ಗಳನ್ನು ಹೊರವಲಯಕ್ಕೆ ಓಡಿಸುತ್ತಿದ್ದಾರೆ. ವ್ಯವಸ್ಥೆಯನ್ನು ಸರಿಪಡಿಸುವ ಬದಲು ಪ್ರಯಾಣಿಕರ ಮೇಲೆ ಹೊರೆ ಹಸ್ತಾಂತರಿಸಲಾಗುತ್ತಿದೆ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.