ADVERTISEMENT

ಬಿಜೆಪಿಯಿಂದ ‘ಬೆಂಗಳೂರು ಉಳಿಸಿ‘ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 9:47 IST
Last Updated 2 ಮಾರ್ಚ್ 2018, 9:47 IST
ಬಿಜೆಪಿಯಿಂದ ‘ಬೆಂಗಳೂರು ಉಳಿಸಿ‘ ಪಾದಯಾತ್ರೆ
ಬಿಜೆಪಿಯಿಂದ ‘ಬೆಂಗಳೂರು ಉಳಿಸಿ‘ ಪಾದಯಾತ್ರೆ   

ಬೆಂಗಳೂರು: ಸಿದ್ದರಾಮಯ್ಯ ದುರಾಡಳಿತದಿಂದ ಬೆಂಗಳೂರಿಗೆ ಕಳಂಕ ಬಂದಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕರು, ಬೆಂಗಳೂರು ಉಳಿಸಿ ಆಗ್ರಹದಡಿ ಶುಕ್ರವಾರ ಪಾದಯಾತ್ರೆ ನಡೆಸಿದರು.

ಬಸವನಗುಡಿಯ ಗವಿಗಂಗಾಧರೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಯಿತು. ಮುಂದಿನ 14 ದಿನಗಳ ಕಾಲ ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಪಾದಯಾತ್ರೆ ನಡೆಯಲಿದೆ.

ಪಾದಯಾತ್ರೆಯಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಪ್ರಕಾಶ ಜಾವಡೇಕರ್, ಶಾಸಕರಾದ ಅಶೋಕ್, ಸುರೇಶಕುಮಾರ್, ರವಿ ಸುಬ್ರಹ್ಮಣ್ಯ, ನಾರಾಯಣಸ್ವಾಮಿ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಭಾಗಿಯಾಗಿದದರು.

ADVERTISEMENT

ಕಾಂಗ್ರೆಸ್ ಅಂದರೆ ವಿನಾಶ, ಬಿಜೆಪಿ ಅಂದರೆ ವಿಕಾಸ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೇಳಿದರು. ಸಿದ್ದರಾಮಯ್ಯ ಅಂದರೆ ಮರಳು, ಗೂಂಡಾ ಮಾಫಿಯಾಕ್ಕೆ ಮತ್ತೊಂದು ಹೆಸರು ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.