ADVERTISEMENT

ಬಿಜೆಪಿ ಮುಖಂಡರ ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 19:44 IST
Last Updated 12 ಏಪ್ರಿಲ್ 2018, 19:44 IST
ಆನಂದ್‌ರಾವ್ ವೃತ್ತದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಉಪವಾಸ ಸತ್ಯಾಗ್ರಹ –ಪ್ರಜಾವಾಣಿ ಚಿತ್ರ
ಆನಂದ್‌ರಾವ್ ವೃತ್ತದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಉಪವಾಸ ಸತ್ಯಾಗ್ರಹ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಪ್ರತಿಪಕ್ಷಗಳ ಗದ್ದಲಕ್ಕೆ ಬಜೆಟ್ ಅಧಿವೇಶನ ಕಲಾಪ ಬಲಿಯಾಗಿದ್ದನ್ನು ಖಂಡಿಸಿ ಬಿಜೆಪಿ ಮುಖಂಡರು ಇಲ್ಲಿನ ಆನಂದರಾವ್‌ ವೃತ್ತದಲ್ಲಿ ಗುರುವಾರ ಉಪವಾಸ ಸತ್ಯಾಗ್ರಹ ನಡೆಸಿದರು.

ಕೇಂದ್ರ ಸಚಿವರಾದ ಅನಂತಕುಮಾರ್, ಪ್ರಕಾಶ್ ಜಾವಡೇಕರ್, ರಾಜ್ಯದ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಸೇರಿ ಹಲವು ಮುಖಂಡರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

‘ಕಲಾಪದಿಂದ ಪಲಾಯನ ಮಾಡಿದ್ದಾರೆ. ನೃತ್ಯ ಗೊತ್ತಿಲ್ಲದವರು ವೇದಿಕೆ ಸರಿಯಿಲ್ಲ ಎಂದು ದೂರುತ್ತಿದ್ದಾರೆ. ಇಂಥ ಲಜ್ಜೆಗೆಟ್ಟ ಕೆಲಸವನ್ನು ಕಾಂಗ್ರೆಸ್ ಅಲ್ಲದೆ, ಇನ್ಯಾವ ಪಕ್ಷವೂ ಮಾಡಲು ಸಾಧ್ಯವಿಲ್ಲ’ ಎಂದು ಡಿ.ವಿ.ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

* ಬಿಜೆಪಿ–ಕಾಂಗ್ರೆಸ್‌ ನಡುವೆ ಸೈದ್ಧಾಂತಿಕ ಯುದ್ಧ ಶುರುವಾಗಿದೆ. ಅವರ ವಂಶಪಾರಂಪರ್ಯ ಆಡಳಿತದ ವಿರುದ್ಧ ಸಮರ ಸಾರಿದ್ದೇವೆ

–ಪ್ರಕಾಶ್ ಜಾವಡೇಕರ್, ಸಚಿವ

* ಸಿದ್ದರಾಮಯ್ಯ ಮೀನು–ಮಾಂಸ ಸೇವಿಸಿ ಉಪವಾಸ ಕೂತರೆ, ರಾಹುಲ್ ಚೋಲ ಬಟೂರ ತಿಂದು ಉಪವಾಸ ಸತ್ಯಾಗ್ರಹ ಮಾಡುತ್ತಾರೆ. ನಮ್ಮದು ಅಂತ ಹೋರಾಟವಲ್ಲ

–ಎಚ್‌.ಎನ್‌. ಅನಂತಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.