ಬೆಂಗಳೂರು: ಬೀದಿ ನಾಯಿ ದಾಳಿಗೆ ಒಳಗಾಗಿದ್ದ ಯಲಹಂಕದ ಜಿಷ್ಣುಗೆ ರೂ 5ಲಕ್ಷ ಪರಿಹಾರ ನೀಡಲು ಬಿಬಿಎಂಪಿ ಆದೇಶಿಸುವಂತೆ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ಸೋಮವಾರ ಪೂರ್ಣಗೊಳಿಸಿದ ಹೈಕೋರ್ಟ್, ತೀರ್ಪು ಕಾಯ್ದಿರಿಸಿದೆ.
2010ರಲ್ಲಿ ಜಿಷ್ಣು ಮೇಲೆ ದಾಳಿ ನಡೆಸಿದ್ದ ಬೀದಿ ನಾಯಿಗಳು, ಆತನನ್ನು ಗಾಯಗೊಳಿಸಿದ್ದವು. ಬಾಲಕನ ತಲೆಗೆ 20 ಹೊಲಿಗೆ ಹಾಕಲಾಗಿತ್ತು. ಆತನಿಗೆ ಆಗಿದ್ದ ಹಾನಿಯನ್ನು ಪರಿಗಣಿಸಿ ರೂ 5 ಲಕ್ಷ ಪರಿಹಾರ ಕೋರಿ ಪೋಷಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ವಿಕ್ರಮಜಿತ್ ಸೇನ್, ಬಿ.ವಿ.ನಾಗರತ್ನಾ ಅವರಿದ್ದ ವಿಭಾಗೀಯ ಪೀಠ ಅರ್ಜಿ ವಿಚಾರಣೆ ನಡೆಸಿತು.
ಅರ್ಜಿ ವಜಾ: ಎಲ್ಲ ಬೀದಿ ನಾಯಿಗಳನ್ನೂ ಹತ್ಯೆ ಮಾಡುವಂತೆ ಲೋಕಾಯುಕ್ತರ ಶಿಫಾರಸನ್ನು ವಜಾ ಮಾಡಿ ಹೈಕೋರ್ಟ್ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶದ ವಿರುದ್ಧ ಲೋಕಾಯುಕ್ತ ಸಲ್ಲಿಸಿದ್ದ ಮೇಲ್ಮನವಿಯನ್ನು ಇದೇ ವಿಭಾಗೀಯ ಪೀಠ ವಜಾ ಮಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.