ADVERTISEMENT

ಬೇರೆ ಆಟಕ್ಕೂ ಪ್ರೋತ್ಸಾಹ ಸಿಗಬೇಕು

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 19:30 IST
Last Updated 8 ಜೂನ್ 2011, 19:30 IST
ಬೇರೆ ಆಟಕ್ಕೂ ಪ್ರೋತ್ಸಾಹ ಸಿಗಬೇಕು
ಬೇರೆ ಆಟಕ್ಕೂ ಪ್ರೋತ್ಸಾಹ ಸಿಗಬೇಕು   

ಯಲಹಂಕ: ಕ್ರಿಕೆಟ್ ಆಟದ ರೀತಿಯಲ್ಲಿಯೆ ಇತರ ಕ್ರೀಡೆಗಳಿಗೂ ಪ್ರೋತ್ಸಾಹ ಸಿಗುವಂತಾಗಬೇಕು ಎಂದು ಕ್ರಿಕೆಟ್ ಪಟು ದೊಡ್ಡಗಣೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕೃಷ್ಣಬೈರೇಗೌಡ ಸ್ವಯಂ ಸೇವಕರ ಸಂಘದ ಆಶ್ರಯದಲ್ಲಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಹಕಾರ ನಗರದ ಗಣೇಶ ದೇವಸ್ಥಾನದ ಮೈದಾನದಲ್ಲಿ ಆಯೋಜಿಸಿದ್ದ  ಬ್ಯಾಟರಾಯನಪುರ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
 
ಶಾಸಕ ಕೃಷ್ಣಬೈರೇಗೌಡ ಮಾತನಾಡಿದರು. ಬಿಬಿಎಂಪಿ ಸದಸ್ಯೆ ಎನ್.ಇಂದಿರಾ ಜಿ.ಪಂ.ಸದಸ್ಯರಾದ ಕೆ.ಅಶೋಕನ್, ದಾನೇಗೌಡ, ಮಾಜಿ ಅಧ್ಯಕ್ಷ ರವಿಕುಮಾರ್, ಮಾಜಿ ನಗರಸಭಾ ಅಧ್ಯಕ್ಷರಾದ ಎಂ.ಹನುಮಂತೇಗೌಡ, ಎಸ್.ಶ್ರೀನಿವಾಸರಾಜು, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಆನಂದ್, ಸಮಾಜ ಸೇವಕಿ ಮೀನಾಕ್ಷಿ ಶೇಷಾದ್ರಿ, ಹಾಜರಿದ್ದರು.

ಬಹುಮಾನ: ಪಂದ್ಯಾವಳಿಯಲ್ಲಿ ಮೊದಲ ಸ್ಥಾನ ಪಡೆದ `ಜಕ್ಕೂರಿನ ಆರ್.ಕೆ ಕ್ರಿಕೆಟ್ ಕ್ಲಬ್~ ತಂಡಕ್ಕೆ  37.000 ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನ ಪಡೆದ ಚಿಕ್ಕಜಾಲದ `ಏಕಲವ್ಯ~ ತಂಡಕ್ಕೆ 20,000 ನಗದು ಮತ್ತು ಟ್ರೋಫಿ ಹಾಗೂ ಆರ್.ಕೆ ಕ್ರಿಕೆಟ್ ಕ್ಲಬ್~ ತಂಡದ ಆಟಗಾರ ಜಾನ್ ಅವರಿಗೆ  ಸರಣಿ ಶ್ರೇಷ್ಠ ಬಹುಮಾನವಾಗಿ 3,000 ನಗದು ಮತ್ತು ಟ್ರೋಫಿ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.