ADVERTISEMENT

ಮಕ್ಕಳ ಮೇಲೆ ಒತ್ತಡ ಬೇಡ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 18:43 IST
Last Updated 17 ನವೆಂಬರ್ 2018, 18:43 IST
ಮಹದೇವಪುರ ಕ್ಷೇತ್ರದ ಭೈರತಿ ಸಮೀಪದ ಗೆದ್ದಲಹಳ್ಳಿಯಲ್ಲಿನ ನ್ಯೂ ಬಾಲ್ಡ್ವಿನ್ ಶಾಲೆಯ ಕ್ರೀಡಾಕೂಟದ ವಿಜೇತರಿಗೆ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಎನ್.ಉಷಾರಾಣಿ ಬಹುಮಾನ ವಿತರಿಸಿದರು.
ಮಹದೇವಪುರ ಕ್ಷೇತ್ರದ ಭೈರತಿ ಸಮೀಪದ ಗೆದ್ದಲಹಳ್ಳಿಯಲ್ಲಿನ ನ್ಯೂ ಬಾಲ್ಡ್ವಿನ್ ಶಾಲೆಯ ಕ್ರೀಡಾಕೂಟದ ವಿಜೇತರಿಗೆ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಎನ್.ಉಷಾರಾಣಿ ಬಹುಮಾನ ವಿತರಿಸಿದರು.   

ಬೆಂಗಳೂರು: ಮಕ್ಕಳ ಪಾಲಕರು ತಮಗಿಷ್ಟವಾದ ಕ್ರೀಡೆಯಲ್ಲಿ ತೊಡಗುವಂತೆ ಮಕ್ಕಳ ಮೇಲೆ ಒತ್ತಡ ಹೇರಬಾರದು. ಒಂದು ವೇಳೆ ಒತ್ತಡ ಹೇರಿದರೆ ಮಕ್ಕಳ ಕ್ರೀಡಾ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಎನ್.ಉಷಾರಾಣಿ ಹೇಳಿದರು.

ಮಹದೇವಪುರ ಕ್ಷೇತ್ರದ ಭೈರತಿ ಸಮೀಪದ ಗೆದ್ದಲಹಳ್ಳಿಯಲ್ಲಿ ನ್ಯೂ ಬಾಲ್ಡ್ವಿನ್ ಶಾಲೆಯ 15ನೇ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಆಸಕ್ತಿ ಇರುವ ಕ್ರೀಡೆಯಲ್ಲಿ ತೊಡಗುವಂತೆ ಪ್ರೋತ್ಸಾಹಿಸಬೇಕು. ಆಗಲೇ ಅವರು ಕ್ರೀಡೆಯಲ್ಲಿ ದೊಡ್ಡಮಟ್ಟದಲ್ಲಿ ಸಾಧನೆ ಮಾಡುವರು ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಆಂಜಿನಪ್ಪ ಮಾತನಾಡಿ, ನ್ಯೂಬಾಲ್ಡ್ವಿನ್ ಶಾಲೆಯ ಮಕ್ಕಳು ಪ್ರತಿವರ್ಷವೂ ಜಿಲ್ಲಾ ಹಾಗೂ ರಾಜ್ಯಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಪಡೆಯುತ್ತಲೇ ಇದ್ದಾರೆ. ಇದೊಂದು ಹೆಮ್ಮೆಯ ವಿಷಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.