ADVERTISEMENT

ಮಕ್ಕಳ ವಿಶೇಷ ಪ್ರತಿಭೆ ಪ್ರೋತ್ಸಾಹಿಸಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 20:07 IST
Last Updated 6 ಜನವರಿ 2014, 20:07 IST

ಪೀಣ್ಯ ದಾಸರಹಳ್ಳಿ: ‘ಮಕ್ಕಳು ವಿದ್ಯಾ­ಭ್ಯಾಸಕ್ಕೆ ಸೀಮಿತಗೊಳ್ಳದೇ ವಿವಿಧ ಪ್ರತಿಭೆಗಳು ಅನಾವರಣಗೊಳ್ಳು­ವುದರಿಂದ ಆಸಕ್ತಿಗೆ ಅನುಗುಣವಾಗಿ ಬೆಳೆಯಲು ಸಹಾಯವಾಗುತ್ತದೆ’ ಎಂದು ಎಸ್‌.ಎಸ್‌.ಪಬ್ಲಿಕ್‌ ಶಾಲೆಯ ಅಧ್ಯಕ್ಷ ಸೂಡಿ ಸುರೇಶ್‌ ತಿಳಿಸಿದರು.

ಸುಂಕದಕಟ್ಟೆಯ ವಿಘ್ನೇಶ್ವರ ನಗರದಲ್ಲಿರುವ ಶಾಲೆಯಲ್ಲಿ  ವಸ್ತು ಪ್ರದರ್ಶನ ಹಾಗೂ ಸ್ಥಳದಲ್ಲಿಯೇ ಆಹಾರ ತಯಾರಿಸುವ ಮೇಳದಲ್ಲಿ ಅವರು  ಮಾತನಾಡಿದರು.

ಕರ್ನಾಟಕ ರಾಜ್ಯ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘಟನಾ ಕಾರ್ಯದರ್ಶಿ ಟಿ.ಕೆ.ನರಸೇಗೌಡ, ಕರ್ನಾಟಕ ರಾಜ್ಯ ಕಲಾವಿದರ ಕಲ್ಯಾಣ ವೇದಿಕೆ ಅಧ್ಯಕ್ಷ ಡಾ.ಕೆಂಚನೂರು ಶಂಕರ,  ಈಸ್ಟ್‌–ವೆಸ್ಟ್‌ ಕಾಲೇಜಿನ ಪ್ರಾಂಶುಪಾಲ ಎಂ.ರವೀಂದ್ರ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.