ADVERTISEMENT

ಮನ್ಸೂರ್‌ ₹500 ಕೋಟಿ ಆಸ್ತಿ ಒಡೆಯ!

ಬೆಂಗಳೂರಿನಲ್ಲಿ 12 ಕಡೆ ಆಸ್ತಿ ಹೊಂದಿರುವ ಐಎಂಎ ಮಾಲೀಕ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 20:17 IST
Last Updated 13 ಜೂನ್ 2019, 20:17 IST
ಶಿವಾಜಿನಗರದಲ್ಲಿ ಮುಚ್ಚಿರುವ ಐಎಂಎ ಆಭರಣ ಮಳಿಗೆಗೆ ಗುರುವಾರವೂ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿತ್ತು–ಪ್ರಜಾವಾಣಿ ಚಿತ್ರ
ಶಿವಾಜಿನಗರದಲ್ಲಿ ಮುಚ್ಚಿರುವ ಐಎಂಎ ಆಭರಣ ಮಳಿಗೆಗೆ ಗುರುವಾರವೂ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿತ್ತು–ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಹುಕೋಟಿ ವಂಚನೆ ಪ್ರಕರಣದ ಆರೋಪಿ, ಐಎಂಎ ಜ್ಯುವೆಲ್ಸ್‌ ಮಾಲೀಕ ಮೊಹಮ್ಮದ್‌ ಮನ್ಸೂರ್‌ ಖಾನ್‌ಗೆ ನಗರದ ವಿವಿಧ ಕಡೆಗಳಲ್ಲಿ ಒಟ್ಟು 12 ಆಸ್ತಿಗಳಿವೆ. ಇವುಗಳ ಒಟ್ಟು ಮೌಲ್ಯ ₹500 ಕೋಟಿಗೂ ಅಧಿಕ ಎಂಬುದಾಗಿ ಬಿಬಿಎಂಪಿ ದಾಖಲೆಗಳು ಹೇಳುತ್ತವೆ.

‘ಮನ್ಸೂರ್‌ ವರ್ಷಕ್ಕೆ ₹8.44 ಲಕ್ಷ ಆಸ್ತಿ ತೆರಿಗೆಯನ್ನು ಕಟ್ಟುತ್ತಿದ್ದರು’ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಜಯನಗರ, ಬೆನ್ಸನ್‌ ರಸ್ತೆ, ಪಾರ್ಕ್‌ ರಸ್ತೆ, ಜಯನಗರ 7ನೇ ಬ್ಲಾಕ್‌, ಸೇಂಟ್‌ ಜಾನ್ಸ್‌ ಚರ್ಚ್‌ ರಸ್ತೆ, ಅಲೆಕ್ಸಾಂಡರ್‌ ರಸ್ತೆ, ಲೇಡಿ ಕರ್ಜನ್‌ ರಸ್ತೆ, ಎಚ್‌ಬಿಆರ್‌ ಲೇಔಟ್‌ ಮತ್ತು ನಗರದ ಇತರೆಡೆ ಮನ್ಸೂರ್‌ಖಾನ್‌ ಆಸ್ತಿ ಹೊಂದಿದ್ದಾನೆ. ಇವೆಲ್ಲವೂ ಅವರ ಹೆಸರಿನಲ್ಲಿಯೇ ನೋಂದಣಿಯಾಗಿವೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.