ADVERTISEMENT

ಮಾನಸಿಕ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಅಗತ್ಯ

ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2014, 19:33 IST
Last Updated 1 ಫೆಬ್ರುವರಿ 2014, 19:33 IST
‘ನಿಮ್ಹಾನ್ಸ್‌ ಮೊಗ್ಗು ಪ್ರಾಜೆಕ್ಟ್‌ ಟೀಮ್‌’ ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿತ್ರನಿರ್ದೇಶಕಿ ಕವಿತಾ ಲಂಕೇಶ್‌ ‘ಮೊಗ್ಗಿನ ಮನಸ್ಸು ಅರಳಲಿ’ಪುಸ್ತಕ ಬಿಡುಗಡೆ ಮಾಡಿದರು. ಲೇಖಕಿ ಪ್ರಭಾ ಎಸ್‌.ಚಂದ್ರ, ನಡವಳಿಕೆ ವಿಜ್ಞಾನ ವಿಭಾಗದ ಡೀನ್‌  ಡಾ.ಶೋಭಾ ಶ್ರೀನಾಥ್‌, ಲೇಖಕಿ ವೀಣಾ ಸತ್ಯನಾರಾಯಣ ಇದ್ದಾರೆ-

ಬೆಂಗಳೂರು: ‘ಆಧುನಿಕ ಬದುಕಿನಲ್ಲಿ ದೈಹಿಕ ಕಾಯಿಲೆ ಗಳಂತೆ  ಮಾನಸಿಕ ಸಮಸ್ಯೆಗಳನ್ನು ಪರಿಗಣಿಸಿ ಸೂಕ್ತ ಚಿಕಿತ್ಸೆ ನೀಡುವ ಅಗತ್ಯ ಇದೆ’  ಎಂದು ಚಿತ್ರನಿರ್ದೇಶಕಿ ಕವಿತಾ ಲಂಕೇಶ್‌ ತಿಳಿಸಿದರು.

‘ನಿಮ್ಹಾನ್ಸ್‌ ಮೊಗ್ಗು ಪ್ರಾಜೆಕ್ಟ್‌ ಟೀಮ್‌’ ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಮೊಗ್ಗಿನ ಮನಸ್ಸು ಅರಳಲಿ’ ಪುಸ್ತಕ ಬಿಡುಗಡೆ ಮಾಡಿ ಮಾತನಾ ಡಿದ ಅವರು, ‘ಹೆಣ್ಣಾಗಿ  ಹುಟ್ಟುವುದೇ ತಪ್ಪು ಎಂಬ ನಂಬಿಕೆ ಇಂದಿಗೂ ಗ್ರಾಮೀಣ ಭಾಗದ ಹೆಣ್ಣು ಮಕ್ಕಳಲ್ಲಿ ಇದೆ. ಕೀಳರಿಮೆ, ಹಿಂಜರಿಕೆ, ಮಾನಸಿಕ ಖಿನ್ನತೆ ಗಳಿಂದ ಮುಕ್ತರಾಗದ ಹೊರತು ಜೀವನದಲ್ಲಿ ಏಳಿಗೆ ಹೊಂದಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.

ನಡವಳಿಕೆ ವಿಜ್ಞಾನ ವಿಭಾಗದ ಡೀನ್‌  ಡಾ.ಶೋಭಾ ಶ್ರೀನಾಥ್‌, ‘ಎಲ್ಲಾ ಶಾಲೆ ಹಾಗೂ ಕಾಲೇಜುಗಳಲ್ಲಿ ಕಡ್ಡಾಯವಾಗಿ ಮಾನಸಿಕ ಸಲಹಾ ಕೇಂದ್ರದ ಸ್ಥಾಪನೆ ಮಾಡಬೇಕು. ಹದಿಹರೆಯದ ಮಕ್ಕಳಿಗೆ ಸಲಹೆ ಒದಗಿಸುವುದರಿಂದ ಭವಿಷ್ಯವನ್ನು ಭದ್ರ­ವಾ­ಗಿಸಲು ಸಾಧ್ಯವಿದೆ’ ಎಂದರು.

ಹದಿಹರೆಯದ ಹೆಣ್ಣುಮಕ್ಕಳು ಅನುಭವಿಸುವ ಮಾನಸಿಕ ತಲ್ಲಣಗಳ ಕುರಿತ ‘ಮೊಗ್ಗು’ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.