ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರು ಇದೇ 30ಕ್ಕೆ ನಿವೃತ್ತಿಯಾಗಲಿದ್ದು, ನೂತನ ಮುಖ್ಯಕಾರ್ಯದರ್ಶಿ ಸ್ಥಾನಕ್ಕೆ ಹಿರಿಯ ಐಎಎಸ್ ಅಧಿಕಾರಿ ಸುಧೀರ್ ಕೃಷ್ಣ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.
ಪ್ರಸ್ತುತ ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿರುವ 1977ನೇ ತಂಡದ ಕರ್ನಾಟಕ ಕೇಡರ್‌ನ ಸುಧೀರ್‌ಕೃಷ್ಣ ಅವರು ರಾಜ್ಯಕ್ಕೆ ಹಿಂತಿರುಗಲು ಉತ್ಸುಕರಾಗಿದ್ದಾರೆ. ಸೇವಾ ಹಿರಿತನ ಪರಿಗಣಿಸಿ ಅವರನ್ನೇ ಮುಖ್ಯಕಾರ್ಯದರ್ಶಿಯನ್ನಾಗಿ ನೇಮಕ ಮಾಡಲು ಸಿಎಂಸಿದ್ದರಾಮಯ್ಯ ಒಲವು ತೋರಿದ್ದಾರೆ ಎನ್ನಲಾಗಿದೆ.
13 ವರ್ಷಗಳಿಂದ ಕೇಂದ್ರ ಸೇವೆಯಲ್ಲಿರುವ ಅವರು 2014ರ ಜೂನ್‌ನಲ್ಲಿ ನಿವೃತ್ತಿಯಾಗಲಿದ್ದಾರೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗಳಾಗಿರುವ ಕೌಶಿಕ್ ಮುಖರ್ಜಿ, ಎಲ್.ವಿ.ನಾಗರಾಜನ್, ಅರವಿಂದ್ ಜಾಧವ್ ಅವರೂ ಮುಖ್ಯಕಾರ್ಯದರ್ಶಿ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ. ಕೌಶಿಕ್ ಮುಖರ್ಜಿ ಹಾಗೂ ನಾಗರಾಜನ್ ಅವರು 2015ಕ್ಕೆ ಹಾಗೂ ಅರವಿಂದ್ ಜಾಧವ್ ಅವರು 2016ಕ್ಕೆ ನಿವೃತ್ತಿಯಾಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.